ರಣ್ಬೀರ್ ಬಾಲಿವುಡ್ನ ಸುರಸುಂದರಾಂಗ ನಟ. ಆಲಿಯಾ ಭಟ್ ಪತಿ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ರಣ್ಬೀರ್ ಕಪೂರ್ನ ವೀಡಿಯೋವೊಂದು ಹರಿದಾಡುತ್ತಿದೆ. ಆ ವೀಡಿಯೋದಲ್ಲಿ ಆಲಿಯಾ ಕೂಡ ಜೊತೆಗಿದ್ದು, ಕೇಕ್ ಮೇಲೆ ಎಣ್ಣೆ ಸುರಿದು ಬೆಂಕಿ ಹಚ್ಚಿರೋದು ಕಂಡುಬಂದಿದೆ.
ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ. ಆದರೂ ಸಹ ಟ್ವಿಟ್ಟರ್ನಲ್ಲಿ ಫಾತಿಮಾ ಖಾನ್ ಎಂಬವರು ದೃಶ್ಯವನ್ನು ಹಂಚಿಕೊಂಡಿದ್ದಾರೆ. ದೃಶ್ಯದಲ್ಲಿ ಡಿನ್ನರ್ ಸಮಯದಲ್ಲಿ ಕೇಕ್ ಮೇಲೆ ರಣ್ಬೀರ್ ಎಣ್ಣೆ ಸುರಿಯಲು ಹೇಳಿದ್ದಾರೆ. ಬಳಿಕ ಅದಕ್ಕೆ ಲೈಟರ್ನಿಂದ ಬೆಂಕಿ ಹಚ್ಚಿದ್ದಾರೆ. ಅನೇಕರು ರಣ್ಬೀರ್ ಬಳಿ ಹೀಗೆ ಮಾಡಬೇಡಿ ಎಂದು ಹೇಳಿದ್ದಾರೆ. ಅದಕ್ಕೆ ರಣ್ಬೀರ್ ‘ಶಟ್ ಅಪ್ ಯುವರ್ ಬ್ಯಾಡ್’ ಎಂದು ಹೇಳಿರುವ ಕಂಡುಬಂದಿದೆ. ಜೊತೆಗೆ ಆಲಿಯಾ ಕೂಡ ಅದನ್ನು ಇಷ್ಟಪಡದೇ ಇರೋದು ದೃಶ್ಯದಲ್ಲಿ ಕಾಣಿಸಿದೆ. ಬೆಂಕಿ ಹಚ್ಚಿದ ಬಳಿಕ ಹಿಂದೂ ದೇವಿಯನ್ನು ಸ್ಮರಿಸಿದ್ದು ಕೇಳಿಬಂದಿದೆ. ನಂತರ ‘ಜೈ ಮಾತಾ ದಿ’ ಎಂದು ಹಿಂದೂ ದೇವರ ಹೆಸರನ್ನು ಹೇಳಿದ್ದಾರೆ. ಇದಕ್ಕೆ ಹಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ದೃಶ್ಯ ಕ್ರಿಸ್ಮಸ್ ಹಬ್ಬದ ಸಮಯದ್ದು ಎಂಬುದು ಕಂಡುಬರುತ್ತಿದೆ. ಆಲಿಯಾ ತಲೆಯ ಮೇಲೆ ಕ್ರಿಸ್ಮಸ್ ಕಿರೀಟ ಇಟ್ಟುಕೊಂಡಿರೋದು ಕಂಡುಬಂದಿದೆ. ಇನ್ನು ರಣ್ಬೀರ್ ವಿಚಿತ್ರ ವರ್ತನೆಯ ವೀಡಿಯೋ ಕಂಡು ಸಂಜಯ್ ತಿವಾರಿ ಎಂಬವರು ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಐಪಿಸಿ ಸೆಕ್ಷನ್ 295A ( ಧಾರ್ಮಿಕ ಭಾವನೆಗಳಿಗೆ ದಕ್ಕೆ), 298 (ಧಾರ್ಮಿಕ ಭಾವನೆಗಳನ್ನು ನೋಯಿಸಲು ಉದ್ದೇಶಪೂರ್ವಕವಾಗಿ ಬಳಸಿದ ಪದ), ಸೆಕ್ಷನ್ 500 (ಮಾನನಷ್ಟ) ಮತ್ತು 34 (ಸಾಮಾನ್ಯ ಉದ್ದೇಶಕ್ಕಾಗಿ ಹಲವರು ಮಾಡಿದ ಕೃತ್ಯ) ಅಡಿಯಲ್ಲಿ ನಟನ ವಿರುದ್ಧ ಕೇಸ್ ದಾಖಲಾಗಿದೆ.
ಪಾರ್ಟಿಯಲ್ಲಿ ಯಾರೆಲ್ಲ ಇದ್ದರು..?
ರಣಬೀರ್ ಕಪೂರ್, ನವ್ಯಾ ನಂದಾ, ಆಲಿಯಾ ಭಟ್, ರಹಾ ಕಪೂರ್, ಅಗಸ್ತ್ಯಾ ನಂದಾ, ನಿಖಿಲ್ ನಂದಾ, ಸಮೈರಾ ಇದ್ದರು.


























