ವಿಟ್ಲ : ಯುವ ಬ್ರಿಗ್ರೇಡ್ ಸಂಸ್ಥೆಯ ವತಿಯಿಂದ ಹೊರಟಂತಹ ಅಯೋಧ್ಯಾ ಶ್ರೀರಾಮ ಜನ್ಮಭೂಮಿಯ ಸಮಗ್ರ ಮಾಹಿತಿಯನ್ನು ಬಿತ್ತರಿಸುವ ‘ಹನುಮ ರಥ’ವನ್ನು ವಿಟ್ಲ ಖಾಸಗಿ ಬಸ್ ನಿಲ್ದಾಣದ ಬಳಿ ಸ್ವಾಗತಿಸಲಾಯಿತು.

ಹನುಮ ರಥದ ಎಲ್ಇಡಿ ಪರದೆಯಲ್ಲಿ 20 ನಿಮಿಷಗಳ ಕಾಲ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಅದರಲ್ಲಿ 500 ವರ್ಷಗಳ ಅಯೋಧ್ಯಾ ರಾಮಜನ್ಮಭೂಮಿಯ ಹೋರಾಟ, ಮಂದಿರ ನಿರ್ಮಾಣಕ್ಕೆ ಎದುರಾದ ಸವಾಲುಗಳು ಮತ್ತು ಅದನ್ನು ಜಯಿಸಿದ ರೀತಿಯ ಬಗ್ಗೆ ಪ್ರದರ್ಶಿಸಲಾಯಿತು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ ಅವರು ಅಯೋಧ್ಯಾ ಹೋರಾಟದ ಹಾಗೂ ಮಂದಿರ ಪುನರ್ನಿರ್ಮಾಣದ ಮಾಹಿತಿಯನ್ನು ನೀಡಿದರು. ಯುವ ಬ್ರಿಗೇಡ್ ಸಂಸ್ಥೆಯ ಚಂದ್ರಶೇಖರ ನಂಜನಗೂಡು ಪ್ರಸ್ತಾವಿಸಿ ಸ್ವಾಗತಿಸಿದರು. ಭವ್ಯಾ ರಾಜೇಶ್ ವಂದಿಸಿದರು.

ಈ ಸಂದರ್ಭದಲ್ಲಿ ಅಯೋಧ್ಯಾ ಕರಸೇವೆಯಲ್ಲಿ ಭಾಗವಹಿಸಿದ ಮೋಹನದಾಸ್ ಉಕ್ಕುಡ, ವೀರಪ್ಪ ಗೌಡ, ವಸಂತ ಎರುಂಬು, ಶ್ರೀಕೃಷ್ಣ ವಿಟ್ಲ, ಕರುಣಾಕರ ನಾಯ್ತೊಟ್ಟು, ವಿಶ್ವನಾಥ ನಾಯ್ತೊಟ್ಟು , ಪಟ್ಟಣ ಪಂಚಾಯತ್ ಸದಸ್ಯರಾದ ಹರೀಶ್ ಸಿಎಚ್, ಅಶೋಕ್ ಕುಮಾರ್ ಶೆಟ್ಟಿ, ಅರುಣ್ ವಿಟ್ಲ, ಸಂಗೀತಾ ಪಾಣೆಮಜಲು, ರಕ್ಷಿತಾ ಸನತ್, ಜಯಂತ್ ಸಿಎಚ್, ಗೋಪಿಕೃಷ್ಣ, ಸುನೀತಾ ಉಕ್ಕುಡ, ವಿಜಯಲಕ್ಷ್ಮಿ ಉಕ್ಕುಡ, ಪ್ರಮುಖರಾದ ಚಂದ್ರಕಾಂತಿ ಶೆಟ್ಟಿ, ಜಗದೀಶ್ ಪಾಣೆಮಜಲು, ರವಿಶಂಕರ್ ವಿಟ್ಲ, ವಿಘ್ನೇಶ್ ಕಾಮತ್, ಶಿಶಿರ್ ಗೌಡ ಉಪಸ್ಥಿತರಿದ್ದರು.




























