ಗೂಢಾಚಾರಿಕೆ ಆರೋಪದಡಿ ಮರಣದಂಡನೆ ಶಿಕ್ಷೆಗೆ ಒಳಗಾಗಿದ್ದ ಭಾರತದ 8 ಮಾಜಿ ನೌಕಾಪಡೆಯ ಸಿಬ್ಬಂದಿ ಶಿಕ್ಷೆಯನ್ನು ಕತಾರ್ ಸರ್ಕಾರ ತಡೆಹಿಡಿದಿದೆ. ಪ್ರಧಾನಿ ಮೋದಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಕತಾರ್ ನ್ಯಾಯಾಲಯ ಸ್ವೀಕರಿಸಿದ್ದ ಬೆನ್ನಲ್ಲೇ ಈ ಆದೇಶ ಹೊರಡಿಸಲಾಗಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಕತಾರ್ ನ್ಯಾಯಾಲಯವು ನಮ್ಮ ಮೇಲ್ಮನವಿಯನ್ನು ಪರಿಶೀಲಿಸಿ ನೌಕಾಪಡೆ ಸಿಬ್ಬಂದಿ ಶಿಕ್ಷೆಯ ಪ್ರಮಾಣವನ್ನು ಮೂರರಿಂದ 25 ವರ್ಷಗಳ ವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಳಿಸಲಾಗಿದೆ.
ಮೋದಿ ನೇತೃತ್ವದಲ್ಲಿ 2015 ರಲ್ಲಿ ಮಾಡಿಕೊಂಡ ಒಪ್ಪಂದದ ಪ್ರಕಾರ ಕತಾರ್‌ನಲ್ಲಿ ಶಿಕ್ಷೆಗೊಳಗಾದ ಭಾರತೀಯ ಕೈದಿಗಳನ್ನು ಅವರ ಶಿಕ್ಷೆಯ ಉಳಿದ ಭಾಗವನ್ನು ಪೂರೈಸಲು ಭಾರತಕ್ಕೆ ಹಿಂತಿರುಗಿಸಬಹುದು ಎಂದು ಉಲ್ಲೇಖಿಸಲಾಗಿದ್ದು, ಆರೋಪಿಗಳನ್ನು ಭಾರತ ಸರ್ಕಾರಕ್ಕೆ ಒಪ್ಪಿಸುವ ಸಾಧ್ಯತೆಯಿದೆ. ಮೋದಿ ನಾಯಕತ್ವದಲ್ಲಿ ಭಾರತದ ವಿದೇಶಾಂಗ ನೀತಿಯ ಬಲವನ್ನು ಇದು ಮತ್ತೊಮ್ಮೆ ಸ್ಪಷ್ಟಪಡಿಸಿದೆ ಎಂದು ಸಿಬ್ಬಂದಿಗಳ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.


























