ಮಂಗಳೂರು : ಅರಬ್ಬಿ ಸಮುದ್ರದಲ್ಲಿ ಈಜಲು ತೆರಳಿದ ಇಬ್ಬರು ಪ್ರವಾಸಿಗರು ಸಾವನ್ನಪ್ಪಿರುವಂತಹ ಘಟನೆ ಮಂಗಳೂರಿನ ಉಳ್ಳಾಲ ಬಳಿ ನಡೆದಿದೆ.
ಸಲ್ಮಾನ್(19), ಬಶೀರ್(23) ಮೃತರು.
ಯುವಕ ಸೈಫ್ ಆಲಿನನ್ನು ಸ್ಥಳೀಯ ಜೀವರಕ್ಷಕ ತಂಡ ರಕ್ಷಣೆ ಮಾಡಿದೆ. ಚಿಕ್ಕಮಗಳೂರು ಮೂಲದ ಮೂವರು ಉಳ್ಳಾಲ ದರ್ಗಾಗೆ ಬಂದಿದ್ದಾಗ ಘಟನೆ ಸಂಭವಿಸಿದೆ.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.


























