ನವದೆಹಲಿ : ತ್ರಿಕೋನ ಪ್ರೇಮಕತೆಯೊಂದು ಕೊಲೆಯಲ್ಲಿ ಅಂತ್ಯವಾದ ಘಟನೆ ದೆಹಲಿಯಲ್ಲಿ ನಡೆದಿದೆ.
ಉತ್ತರ ಭಾಗದ ಭಗೀರತಿ ವಿಹಾರ್ ಎಂಬಲ್ಲಿ ಒಬ್ಬಳಿಗಾಗಿ ಇಬ್ಬರು ಬಡಿದಾಡಿಕೊಂಡಿದ್ದಾರೆ. ಕೊನೆಗೆ ಮಹೀರ್ ಅಲಿಯಾಸ್ ಇಮ್ರಾನ್ ಎಂಬಾತ ಘಟನೆಯಲ್ಲಿ ಸಾವನ್ನಪ್ಪಿದ್ದಾನೆ.
ಕೊಲೆಗಾರ ಅರ್ಮಾನ್ ಖಾನ್ಗೆ (18) ಇನ್ಸ್ಟಾಗ್ರಾಂನಲ್ಲಿ 21 ವರ್ಷದ ಯುವತಿಯೊಬ್ಬಳ ಮೇಲೆ ಲವ್ ಆಗುತ್ತದೆ. ಆಕೆಯ ಜೊತೆಗೆ ಡೇಟ್ ಕೂಡ ಮಾಡುತ್ತಿದ್ದನು. ಆದರೆ ಅದೇ ಯುವತಿಯನ್ನು ಮಹೀರ್ ಕೂಡ ಇಷ್ಟಪಟ್ಟಿದ್ದು, ಕೊನೆಗೆ ಒಬ್ಬಳಿಗಾಗಿ ಇಬ್ಬರ ಜಗಳದಿಂದ ಮಹೀರ್ ಸಾವನ್ನಪ್ಪಿದ್ದಾನೆ. ಅರ್ಮಾನ್ 50 ಭಾರಿ ಆತನನ್ನು ಚುಚ್ಚಿ ಕೊಲೆ ಮಾಡಿದ್ದಾನೆ.
ಯಾವಾಗ ಅರ್ಮಾನ್ಗೆ ತಾನು ಇಷ್ಟಪಟ್ಟ ಹುಡುಗಿಯ ಜೊತೆಗೆ ಮಹೀರ್ ಡೇಟ್ ಮಾಡುತ್ತಿರುವ ವಿಚಾರ ಗೊತ್ತಾಗುತ್ತದೆಯೋ, ವಿಚಾರ ದೊಡ್ಡದಾಗುತ್ತದೆ. ಅರ್ಮಾನ್ ಮತ್ತು ಮಹೀರ್ ವಾದಕ್ಕಿಳಿಯುತ್ತಾರೆ. ಕೊನೆಗೆ ಮಹೀರ್ ಜೊತೆಗೆ ಯುವತಿ ವೀಡಿಯೋ ಕರೆಯಲ್ಲಿರುವುದನ್ನು ಕಂಡ ಅರ್ಮನ್ ಆಕೆಯ ಬಳಿಯಿಂದ ಮೊಬೈಲ್ ಕಿತ್ತುಕೊಂಡು ಹೋಗುತ್ತಾನೆ.
ಯುವತಿಯ ಕೈಯಿಂದ ಮೊಬೈಲ್ ಕಿತ್ತುಕೊಂಡು ಕೊನೆಗೆ ಮಹೀರ್ಗೆ ಕರೆ ಮಾಡಿ ಆಕೆಯ ಫೋನ್ ಹಿಂತಿರುಗಿಸುತ್ತೇನೆ. ನಾನು ಹೇಳಿದ ಸ್ಥಳಕ್ಕೆ ಬಂದು ಮೊಬೈಲ್ ತೆಗೆದುಕೊಂಡು ಹೋಗು ಎಂದು ಹೇಳುತ್ತಾನೆ. ಅದರಂತಯೇ ಬಂದ ಮಹೀರ್ನನ್ನು ಅರ್ಮಾನ್ ಚುಚ್ಚಿ ಕೊಲೆ ಮಾಡುತ್ತಾನೆ.
ಸದ್ಯ ಪೊಲೀಸರು ಅರ್ಮಾನ್ ಮತ್ತು ಆತನ ಸ್ನೇಹಿತರಾದ ಫೈಜಲ್(21), ಮೊಹಮ್ಮದ್ ಶಮೀರ್(19)ನನ್ನು ಬಂಧಿಸಿದ್ದಾರೆ.

























