ಪುತ್ತೂರು : ಕೋಟಿ ಚೆನ್ನಯ ದೇಯಿ ಬೈದ್ಯೆತಿ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಗೆ ಬೆಳ್ತಂಗಡಿಯ ಮಾಜಿ ಶಾಸಕರಾದ ಕೆ ವಸಂತ ಬಂಗೇರವರು ಮೇ.19 ರಂದು ಭೇಟಿ ನೀಡಿದರು.
ಅವರು ತಮ್ಮ ಭೇಟಿಯ ಕಾಲದಲ್ಲಿ ಗೆಜ್ಜೆ ಗಿರಿಯ ಶಿಖರದಲ್ಲಿರುವ ನಾಗಸಾನ್ನಿಧ್ಯ ಕೋಟಿ ಚೆನ್ನಯರ ಮೂಲಸ್ಥಾನ ಗರಡಿ ಭೇಟಿ ಕೊಟ್ಟ ಬಳಿಕ ದೇಯಿ ಬೈದ್ಯೆತಿ ಮಹಾ ಸಮಾಧಿ ಧೂಮಾವತಿ ಗುಡಿ ಕುಪ್ಪೆ ಪಂಜುರ್ಲಿ ಗುಡಿಗಳಿಗೆ ಭೇಟಿ ಕೊಟ್ಟರು. ಕಾರಣಿಕ ಶಕ್ತಿ ದೇಯಿ ಬೈದ್ಯೆತಿಯ ಗುಡಿಯಲ್ಲಿ ಜಗತ್ತಿಗೆ ಆವರಿಸಿದ ಕೋವಿಡ್ ಮಹಾಮಾರಿಯನ್ನು ಆದಷ್ಟು ಶೀಘ್ರ ತೊಲಗಿಸಲು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಕಛೇರಿಗೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪರಿಶೀಲಿಸಿ ಸಂತೋಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಡಾ. ರಾಜಾರಾಮ್ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾದ ಜಯಂತ ನಡುಬೈಲ್, ಉಪಾಧ್ಯಕ್ಷರಾದ ಪೀತಾಂಬರ ಹೆರಾಜೆ, ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ ಚಿಲಿಂಬಿ, ಕೋಶಾಧಿಕಾರಿ ದೀಪಕ್ ಕೋಟ್ಯಾನ್ ಅನುವಂಶಿಕ ಮೊಕ್ತೇಸರ ಶ್ರೀಧರ ಪೂಜಾರಿ, ಆಂತರಿಕ ಲೆಕ್ಕಪರಿಶೋಧಕ ಶೇಖರ ಬಂಗೇರ ಮುಂತಾದ ಗಣ್ಯರು ಜೊತೆಗಿದ್ದರು.