ಪುತ್ತೂರು : ತಾಲೂಕಿನ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ನಬ್ಬ ಸಂಸ್ಥೆಯ ಸಹಯೋಗದಲ್ಲಿ ಸ್ಯಾಮ್ ಫಿಟ್ನೆಸ್ ಉಪ್ಪಿನಂಗಡಿ ಇದರ ಪ್ರಾಯೋಜಕತ್ವದಲ್ಲಿ ಜ.27 ರಂದು ಉಪ್ಪಿನಂಗಡಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ದೇಹದಾಡ್ಯ ಸ್ಪರ್ಧೆಯ ಆಮಂತ್ರಣ ಪತ್ರಿಕೆಯನ್ನು ಡಿ.30 ರಂದು ಸ್ಯಾಮ್ ಫಿಟ್ನೆಸ್ ಉಪ್ಪಿನಂಗಡಿಯಲ್ಲಿ ಬಿಡುಗಡೆಗೊಳಿಸಲಾಯಿತು.

ಈ ವೇಳೆ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಕರ್ನಾಟಕ ರಾಜ್ಯ ಇಂಟೆಕ್ ಕಾರ್ಯದರ್ಶಿ ನಜೀರ್ ಮಠ, ಉಬಾರ್ ಸ್ಪೋಟಿಂಗ್ ಕ್ಲಬ್ ನ ಅಧ್ಯಕ್ಷರಾದ ಶಬೀರ್ ಕೆಂಪಿ, ಮುತ್ತೂಟ್ ಫೈನಾನ್ಸ್ ನ ಕ್ಲಸ್ಟರ್ ಮ್ಯಾನೇಜರಾದ ಸಂದೇಶ್ ಶೆಣೈ ಹಾಗೂ ಸ್ಯಾಮ್ ಫಿಟ್ನೆಸ್ ನ ಸದಸ್ಯರು ಉಪಸ್ಥಿತರಿದ್ದರು.



























