ಬಂಟ್ವಾಳ : ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ಚರಂಡಿ ಮೇಲೆ ಹತ್ತಿ ನಿಂತುಕೊಂಡ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಮಾಣಿ ಸಮೀಪದ ಸೂರಿಕುಮೇರು ಎಂಬಲ್ಲಿ ನಡೆದಿದೆ.

ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕಾರು ಹೆದ್ದಾರಿ ಬದಿ ಗುಡ್ಡ ಜರಿದು ಬೀಳದಂತೆ ಕಟ್ಟಲಾದ ತಡೆಗೋಡೆಗೆ ಗುದ್ದಿ ಬಳಿಕ ಚರಂಡಿ ಮೇಲೆ ಹತ್ತಿ ನಿಂತುಕೊಂಡಿದೆ.
ಘಟನೆಯಿಂದ ಕಾರು ಜಖಂಗೊಂಡಿದ್ದು, ಅದೃಷ್ಟವಶಾತ್ ಕಾರಿನೊಳಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಅಲ್ಪಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ.
ಚಾಲಕ ಸಹಿತ ಮೂವರು ಮಹಿಳೆಯರಿದ್ದು, ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿವೆ.



























