ಇಂದಿನಿಂದ ರಾಜ್ಯಾದ್ಯಂತ ಓಟಿ, ಬಿಪಿ, 8 ಪಿಎಂ ದರ ಏಕಾಏಕಿ ಹೆಚ್ಚಳವಾಗಿದೆ. ಮದ್ಯ ಉತ್ಪಾದನ ಕಂಪನಿಗಳು ಕ್ವಾಟರ್ ಗೆ 20 ರಿಂದ ಮೂವತ್ತು ರೂಪಾಯಿ ಏರಿಸಿದೆ. ಈಗಾಗಲೇ ಮದ್ಯ ತಯಾರಿಕೆ ಕಂಪನಿಗಳು ಬಾರ್ ಮಾಲೀಕರಿಗೆ ಸಂದೇಶ ಕಳುಹಿಸಿದೆ.
ಮದ್ಯ ತಯಾರಿಕೆ ಕಂಪನಿಗಳು ರಾಜ್ಯದ ಕೆಳ ವರ್ಗದ ಜನ ಅತೀ ಹೆಚ್ಚು ಸೇವಿಸುವ ಓಟಿ, ಬಿಪಿ, 8ಪಿಎಂ ದರ ಏರಿಸಿದೆ. ಇದರಿಂದಾಗಿ ಅಬಕಾರಿ ಇಲಾಖೆ ಹಾಗೂ ಕಂಪನಿಗಳ ವಿರುದ್ಧ ಮದ್ಯ ಪ್ರಿಯರ ಆಕ್ರೋಶ ಹೊರಹಾಕಿದ್ದಾರೆ.
ಅತ್ತ ಮದ್ಯ ಉತ್ಪನ್ನ ಕಂಪನಿಗಳು ಉತ್ಪಾದನ ವೆಚ್ಚ ಅಧಿಕವಾಗಿದೆ ಎಂದು ಹೇಳಿದೆ. ಇತ್ತ ಬಾರ್ ಮಾಲೀಕರು ಹೀಗೆ ರೇಟ್ ಹೆಚ್ಚಳವಾದ್ರೆ ಮದ್ಯ ಮಾರಾಟದಲ್ಲಿ ಕುಸಿತ ಆಗುತ್ತೆ ಅಂತಿದ್ದಾರೆ. ಈ ಬ್ರಾಂಡ್ ಗಳಿಗಿಂತ ಕಡಿಮೆ ರೇಟಿನ ಎಣ್ಣೆಗೆ ಜನ ಶಿಫ್ಟ್ ಆಗುವ ಸಾಧ್ಯತೆಯಿದೆ ಎಂದಿದ್ದಾರೆ.
1. ಓಟಿ 180 ಎಂಎಲ್
ಸದ್ಯದ ದರ 90 ರೂಪಾಯಿ
ಜನವರಿ 1ರಿಂದ 111 ರೂಪಾಯಿ
2. ಬಿಪಿ 180 ಎಂಎಲ್
ಸದ್ಯದ ದರ 110 ರೂಪಾಯಿ
ಜನವರಿಯಿಂದ 145 ರೂಪಾಯಿ
3. 8ಪಿಎಂ (180 ಎಂಎಲ್)
ನಿನ್ನೆಯ ದರ 90 ರೂಪಾಯಿ
ಇಂದಿನ ದರ 111 ರೂಪಾಯಿ