ಸುಳ್ಯ : ಸರಕಾರ ಈ ಹಿಂದೆ ನೇಮಕಗೊಳಿಸಿ ಆದೇಶ ಮಾಡಿದ್ದ ಅಕ್ರಮ ಸಕ್ರಮ ಸಮಿತಿಯನ್ನು ರದ್ದುಗೊಳಿಸಿ, ಇದೀಗ ಹೊಸ ಸಮಿತಿಯನ್ನು ನೇಮಿಸಿದೆ.

ಸಮಿತಿಯ ಅಧ್ಯಕ್ಷರಾಗಿ ಶಾಸಕಿ ಭಾಗೀರಥಿ ಮುರುಳ್ಯ, ಸದಸ್ಯರುಗಳಾಗಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಟಾರ್, ಕಡಬ ಕಾಂಗ್ರೆಸ್ ನಾಯಕರಾದ ಪಿ.ಪಿ.ವರ್ಗೀಸ್ ಹಾಗೂ ಹೆಚ್. ಆದಂ ರನ್ನು ನೇಮಕಗೊಳಿಸಿ ಆದೇಶಿಸಲಾಗಿದೆ.


























