ಪ್ರಧಾನಿ ನರೇಂದ್ರ ಮೋದಿ ಜನವರಿ 2, 3 ರಂದು ದಕ್ಷಿಣ ಭಾರತ ಪ್ರವಾಸ ಕೈಗೊಂಡಿದ್ದರು. ತಮಿಳುನಾಡು, ಕೇರಳಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲೂ ಲಕ್ಷದೀಪಕ್ಕೂ ಹೋಗಿದ್ದರು. ಮೋದಿ ಲಕ್ಷದ್ವೀಪದಲ್ಲಿ ರೌಂಡ್ಸ್ ಹಾಕಿದ ನಂತರ ಈ ದ್ವೀಪದ ಬಗ್ಗೆ ಜನರಲ್ಲಿ ಕುತೂಹಲ ಹೆಚ್ಚಾಗಿದೆ.
ಮೋದಿ ಪ್ರವಾಸಕ್ಕೆ ಹೋಗಿದ್ದ ಲಕ್ಷ ದ್ವೀಪದ ಸ್ಥಳವನ್ನು ಅತೀ ಹೆಚ್ಚಿನ ಜನರು ಗೂಗಲ್ನಲ್ಲಿ ಸರ್ಚ್ ಮಾಡಿದ್ದಾರೆ. ಲಕ್ಷ ದ್ವೀಪ ಭೇಟಿ ವೇಳೆ ಕೊಚ್ಚಿ-ಲಕ್ಷ ದ್ವೀಪ ನಡುವಣ ಜಲಾಂತರ್ಗಾಮಿ ಆಪ್ಟಿಕಲ್ ಫೈಬರ್ ಸಂಪರ್ಕ ಜಾಲದ ಶಂಕು ಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಜೊತೆಗೆ ಸಮುದ್ರದ ದಡದಲ್ಲಿ ಕುಳಿತು ತೆಗೆಸಿರುವ ಫೋಟೋಗಳನ್ನು ಶೇರ್ ಮಾಡಿದ್ದರು. ಲಕ್ಷ ದ್ವೀಪದ ಸೌಂದರ್ಯ, ಪ್ರಶಾಂತ ವಾತಾವರಣ ನಿಜಕ್ಕೂ ಮಂತ್ರ ಮುಗ್ದಗೊಳಿಸುತ್ತೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದರು. ಇದರಿಂದಾಗಿ ಪ್ರವಾಸಿಗರಲ್ಲಿ ಕುತೂಹಲ ಹೆಚ್ಚಾಗಿದ್ದು, ಇದನ್ನು ಗಮನಿಸಿದ ಲಕ್ಷಾಂತರ ಮಂದಿ ಪ್ರವಾಸಿಗರು ಈ ಪ್ರದೇಶದ ಬಗ್ಗೆ ಅತಿ ಹೆಚ್ಚು ಸರ್ಚ್ ಮಾಡ್ತಿದ್ದಾರಂತೆ. ಇನ್ನು ಲಕ್ಷದ್ವೀಪಕ್ಕೆ ಭೇಟಿ ನೀಡಿದ ಪ್ರಧಾನಿಯವರು 1,150 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದಾರೆ.
Recently, I had the opportunity to be among the people of Lakshadweep. I am still in awe of the stunning beauty of its islands and the incredible warmth of its people. I had the opportunity to interact with people in Agatti, Bangaram and Kavaratti. I thank the people of the… pic.twitter.com/tYW5Cvgi8N
— Narendra Modi (@narendramodi) January 4, 2024