ವಿಟ್ಲ : ಮಹಿಳೆಯೋರ್ವರು ನಾಪತ್ತೆಯಾಗಿರುವ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಟ್ಲ ಸಮೀಪದ ಪಳಿಕೆ ಜನತಾ ಕಾಲೋನಿ ನಿವಾಸಿ ಲಕ್ಷ್ಮೀ (60) ನಾಪತ್ತೆಯಾಗಿರುವ ಮಹಿಳೆ.

ಲಕ್ಷ್ಮೀ ರವರು ಮಾನಸಿಕವಾಗಿ ಅಸ್ವಸ್ಥರಾಗಿದ್ದು, ವಿಟ್ಲ ಪೇಟೆಯಲ್ಲಿ ತಿರುಗಾಡುತ್ತಿದ್ದರು. ಎಲ್ಲಿಗೆ ಹೋದರು ಸಂಜೆ ವೇಳೆ ಮನೆಗೆ ಹಿಂತಿರುಗುತ್ತಿದ್ದರು. ಆದರೇ ಡಿ.16 ರಂದು ಹೋದವರು ಇಲ್ಲಿಯವರೆಗೆ ಮರಳಿ ಮನೆಗೆ ಬಂದಿರುವುದಿಲ್ಲ ಎಂದು ಮಹಿಳೆಯ ಮನೆ ಸಮೀಪದವರು ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಮಹಿಳೆ ಬಗ್ಗೆ ತಿಳಿದು ಬಂದಲ್ಲಿ ವಿಟ್ಲ ಠಾಣೆಗೆ ಅಥವಾ ಪೊಲೀಸ್ ನಿಯಂತ್ರಣ ಕೋಣೆಗೆ ಮಾಹಿತಿ ತಿಳಿಸಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


























