ಈಶ್ವರಮಂಗಲ : ಹಿಂದೂ ಜಾಗರಣ ವೇದಿಕೆ ಈಶ್ವರಮಂಗಲದ ಸಂಘಟನೆಯ ಸಕ್ರಿಯ ಕಾರ್ಯಕರ್ತ ಸುಜಿತ್ ಗಾಳಿಮುಖ ಅವರ ಪತ್ನಿ ಮತ್ತು ಮಗು ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಚಿಕಿತ್ಸೆಗೆ ಜಾಗರಣ ಸೇವಾ ನಿಧಿಯ ಮುಖಾಂತರ ಊರ ಹಾಗೂ ಪರವೂರ ದಾನಿಗಳಿಂದ ಸಂಗ್ರಹವಾದ ಮೊದಲ ಹಂತ ಮೊತ್ತ ರೂ.100000(ಒಂದು ಲಕ್ಷ) ವನ್ನು ಸಂಘಟನೆಯ ಗೌರವಾಧ್ಯಕ್ಷರಾದ ಕೃಷ್ಣ ಭಟ್ ಮುಂಡ್ಯ ರವರ ಉಪಸ್ಥಿತಿಯಲ್ಲಿ ಗ್ರಾಮಾಧಿಪತಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶೀಘ್ರ ಚೇತರಿಕೆಗೆ ಪ್ರಾರ್ಥಿಸಿ ಸಂಗ್ರಹವಾದ ಮೊತ್ತವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಈ ವೇಳೆ ಸಂಘಟನೆಯ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.


























