ಬೆಳ್ಳಾರೆ : ಮನೆ ಮೇಲೆ ದಾಳಿ ನಡೆಸಿ ಕಲ್ಲು ತೂರಾಟ ನಡೆಸಿರುವುದಾಗಿ ಮಹಿಳೆಯೋರ್ವರು ನೀಡಿರುವ ದೂರಿನ ಮೇರೆಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಳ್ತಿಗೆ ನಿವಾಸಿ ಚಿತ್ರಪ್ರಭಾ ರೈ ನೀಡಿರುವ ದೂರಿನ ಮೇರೆಗೆ ಪವರ್ ಟಿವಿಯ ಪ್ರಶಾಂತ ಭಾಗೇಪಲ್ಲಿ, ಭಾಸ್ಕರ ಧರ್ಮಸ್ಥಳ, ಪ್ರದೀಪ್ ಶೆಟ್ಟಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ಚಿತ್ರಪ್ರಭಾ ರೈ ಅವರು ಜ.6 ರಂದು ಮಧ್ಯಾಹ್ನ ಸಮಯ ತನ್ನ ಮನೆಯಲ್ಲಿದ್ದಾಗ, ಪ್ರಶಾಂತ ಬಾಗೇಪಲ್ಲಿ, ಭಾಸ್ಕರ ಧರ್ಮಸ್ಥಳ, ಪ್ರದೀಪ್ ಶೆಟ್ಟಿ ಹಾಗೂ ಸಹಚರರು ಮನೆಗೆ ಬಂದು, ಪವರ್ ಟಿವಿಯ ರಾಕೇಶ್ ಶೆಟ್ಟಿ ಮತ್ತು ಪ್ರಶಾಂತ್ ಎಂಬವರ ವಿರುದ್ದ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರನ್ನು ಹಿಂದಕ್ಕೆ ಪಡೆಯಬೇಕು ಹಾಗೂ 5 ಲಕ್ಷ ಹಣ ನೀಡಬೇಕು, ಇಲ್ಲದಿದ್ದರೆ ಕುಟುಂಬದವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಾಕುವುದಾಗಿ ಬೆದರಿಕೆ ಹಾಕಿದ್ದು, ನಂತರ ಹಲ್ಲೆ ನಡೆಸಲು ಯತ್ನಿಸಿ ಮನೆಯ ಮೇಲೆ ದಾಳಿ ನಡೆಸಿ, ಕಲ್ಲು ತೂರಾಟ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ:05/2024 ಕಲಂ: 120(B),447,506 ಜೊತೆಗೆ 34 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


























