ಪುತ್ತೂರು : ವಲಯ 15ರ ಜೆಸಿಐ ಪುತ್ತೂರು ಘಟಕದ ನೂತನ ಅಧ್ಯಕ್ಷರಾಗಿ ಮೋಹನ ಕೆ., ಕಾರ್ಯದರ್ಶಿಯಾಗಿ ಆಶಾ ಎಮ್., ಕೋಶಾಧಿಕಾರಿಯಾಗಿ ಸುಹಾಸ್ ರೈ ಆಯ್ಕೆಯಾಗಿದ್ದಾರೆ.

ಜೆಸಿಐ ಪುತ್ತೂರು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜ.8 ರಂದು ಸಂಜೆ 6.30ರಿಂದ ಮರೀಲ್ ದ ಪುತ್ತೂರು ಕ್ಲಬ್ನಲ್ಲಿ ನಡೆಯಲಿದೆ.
ಮುಖ್ಯ ಅತಿಥಿಯಾಗಿ ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಗೌರವ ಉಪಸ್ಥಿತರಾಗಿ ಪುತ್ತೂರು ನಗರಸಭಾ ಪೌರಾಯುಕ್ತ ಮಧು ಎಸ್. ಮನೋಹರ್, ಜೆಸಿಐ ವಲಯ ಉಪಾಧ್ಯಕ್ಷ ಶಂಕರ್ ರಾವ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.


























