ಉಪ್ಪಿನಂಗಡಿ : ಶೆಡ್ ನಲ್ಲಿ ನಿಲ್ಲಿಸಿದ್ದ ವಾಹನವನ್ನು ಯಾರೋ ಕೊಂಡೊಯ್ದು ಬೆಂಕಿ ಹಾಕಿರುವುದಾಗಿ ಆರೋಪಿಸಿ ನೀಡಿರುವ ದೂರಿನ ಮೇರೆಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕು, ಬರಿಮಾರು ನಿವಾಸಿ ಲಿಖಿತ್ ಕುಮಾರ್ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಲಿಖಿತ್ ಕುಮಾರ್ ಜ.6 ರಂದು ಪುತ್ತೂರು ತಾಲೂಕು ಹಿರೆಬಂಡಾಡಿ ಗ್ರಾಮದ ಅಡೆಕಲ್ ಮುಳ್ಳುಗುಡ್ಡೆ ಎಂಬಲ್ಲಿರುವ ಪತ್ನಿ ಮನೆಗೆ ಬಂದಿದ್ದು, ರಾತ್ರಿ ವೇಳೆಗೆ ಲಿಖಿತ್ ಅವರ ಭಾವ ಕೀರ್ತನ್ ಎಂಬವರು ಮನೆಯಿಂದ ಹೊರಗೆ ಹೋದಾಗ, ಮನೆಯಿಂದ ಸುಮಾರು 100 ಮೀಟರ್ ದೂರದ ರಸ್ತೆಯಲ್ಲಿ, ಮೋಟಾರು ಸೈಕಲ್‌ವೊಂದು ಬೆಂಕಿಯಿಂದ ಉರಿಯುತ್ತಿರುವುದನ್ನು ಕಂಡು ಮನೆಯವರಲ್ಲಿ ತಿಳಿಸಿದ್ದು, ಈ ವೇಳೆ ಮನೆಯಿಂದ ಹೊರಗೆ ಹೋಗಿ ನೋಡಿದಾಗ, ಪತ್ನಿಯ ಮನೆಯ ಶೆಡ್ ನಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಯಾರೋ ವ್ಯಕ್ತಿಗಳು ಅಲ್ಲಿಂದ ಕೊಂಡು ಹೋಗಿ, ಮನೆಯಿಂದ 100 ಮೀಟರ್ ದೂರದಲ್ಲಿ ರಸ್ತೆಯಲ್ಲಿ ಬೆಂಕಿಹಚ್ಚಿ ಸುಟ್ಟು ನಾಶಪಡಿಸಿದ್ದು, ಈ ವಾಹನದ ದಾಖಲಾತಿಗಳು ಕೂಡಾ ಇದೇ ವಾಹನದಲ್ಲಿದ್ದು, ಸುಟ್ಟುಹೋಗಿದ್ದು ಸುಟ್ಟು ಹೋಗಿದ್ದು, ದ್ವಿ ಚಕ್ರ ವಾಹನದ ಅಂದಾಜು ಮೌಲ್ಯ ರೂ 85,000/- ಆಗಬಹುದು ಎಂಬುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ:05/2024 ಕಲಂ: 447.435 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

























