ಬೆಳ್ತಂಗಡಿ : ಉಜಿರೆ ಗ್ರಾಮದ ಹಲಕ್ಕೆ ಮನೆಯ ಸಿಲ್ವೆಸ್ಟರ್ ರೋಡ್ರಿಗಸ್ ಅವರ ಪುತ್ರ ವಿಲ್ಸನ್ ರೋಡ್ರಿಗಸ್ (34) ಅವರು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಹೃದಯಾಘಾತದಿಂದ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಗುಜರಾತ್‌ನಲ್ಲಿ ಉದ್ಯೋಗದಲ್ಲಿದ್ದ ಅವರು ಊರಿಗೆ ಬರುವ ವೇಳೆ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿಯೇ ಕುಸಿದು ಬಿದ್ದರೆನ್ನಲಾಗಿದ್ದು, ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಮೃತರು ತಂದೆ, ತಾಯಿ, ಸಹೋದರಿಯನ್ನು ಅಗಲಿದ್ದಾರೆ.


























