ಕಡಬ : ಚಲಿಸುತ್ತಿದ್ದ ಟಾಟಾ ಸುಮೋ ಮತ್ತು ಅಂಗಡಿಯೊಂದರ ಮೇಲೆ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ಸುಬ್ರಹ್ಮಣ್ಯ ಸಮೀಪದ ಕೈಕಂಬ ಜಂಕ್ಷನ್ ನಲ್ಲಿ ನಡೆದ ಬಗ್ಗೆ ವರದಿಯಾಗಿದೆ.

ಸುಬ್ರಹ್ಮಣ್ಯದಿಂದ ನೆಟ್ಟಣ ಕಡೆಗೆ ತೆರಳುತ್ತಿದ್ದ ಟಾಟಾ ಸುಮೋ ಹಾಗೂ ಕೈಕಂಬ ಜಂಕ್ಷನ್ ನಲ್ಲಿದ್ದ ಗೂಡಂಗಡಿಯ ಮೇಲೆ ಬೃಹತ್ ಗಾತ್ರದ ಮರ ಬಿದ್ದಿದ್ದು, ಘಟನೆಯಲ್ಲಿ ವಾಹನ ಚಾಲಕ ಬಿಳಿನೆಲೆ ನಿವಾಸಿ ಶೇಖರ್ ಹಾಗೂ ಮತ್ತೋರ್ವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

























