ವಿಟ್ಲ : ಕೋಡಪದವು ಶಾಲೆಯ ದಾಸ್ತಾನು ಕೊಠಡಿ ಮತ್ತು ಮುಖ್ಯ ಶಿಕ್ಷಕರ ಕೊಠಡಿಯ ಬೀಗ ಮುರಿದು ಕಳವಿಗೆ ಯತ್ನ ಮಾಡಿರುವ ಘಟನೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಶಾಲೆ ಕೋಡಪದವಿನಲ್ಲಿ ಆಹಾರ ಸಾಮಾಗ್ರಿಗಳ ದಾಸ್ತಾನು ತುಂಬಿರುವ ಕೊಠಡಿ ಹಾಗೂ ಮುಖ್ಯ ಶಿಕ್ಷಕರ ಕೊಠಡಿಯನ್ನು ಕಳ್ಳರು ಬೀಗ ಮುರಿದು ಕಳವಿಗೆ ಯತ್ನಿಸಿದ್ದು, ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ದಾಸ್ತಾನು ಕೊಠಡಿಯ ಬೀಗವನ್ನು ಮುರಿದುಕೊಂಡು ಹೋಗಿದ್ದು, ಅಲ್ಲಿ ಆಹಾರ ಸಾಮಾಗ್ರಿಗಳು ಇರುವುದನ್ನು ಕಂಡು ಮುಖ್ಯ ಶಿಕ್ಷಕರ ಕೊಠಡಿಯನ್ನು ಮುರಿದಿದ್ದಾರೆ.
ಮುಂದಿನ ತಿಂಗಳು ಉದ್ಘಾಟನೆಗೊಳ್ಳಲಿರುವ ಎರಡು ಕೊಠಡಿಗಳಿಗೆ ದಾನಿಗಳು ನೀಡಿರುವ ಬೆಲೆಬಾಳುವ ವಸ್ತುಗಳು, ಟಿ.ವಿ, ಕಂಪ್ಯೂಟರ್ ಗಳಿದ್ದು ಕಳವಿಗೆ ಪ್ರಯತ್ನಿಸಿದ್ದಾರೆ.

























