ಬಿಹಾರ : ಸೋಷಿಯಲ್ ಮೀಡಿಯಾ ಹುಚ್ಚು ಅದೆಷ್ಟು ಡೇಂಜರ್ಸ್ ಅನ್ನೋದಕ್ಕೆ ಈ ಸ್ಟೋರಿ ಸಾಕ್ಷಿಯಾಗಿದೆ. ಇನ್ಸ್‌ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡಬೇಡಿ ಎಂದ ಗಂಡನನ್ನೇ ಹೆಂಡತಿ ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ಬಿಹಾರದ ಬೇಗುಸರೈನಲ್ಲಿ ನಡೆದಿದೆ.
ಮಹೇಶ್ವರ್ ಕುಮಾರ್ ರೈ ಮೃತಪಟ್ಟ ಗಂಡ. ರಾಣಿ ಕುಮಾರಿ ಕೊಲೆ ಮಾಡಿದ ಆರೋಪಿ.
ಕಳೆದ ಜನವರಿ 7ರ ರಾತ್ರಿ ಮನೆಗೆ ಬಂದ ಮಹೇಶ್ವರ್ ಕುಮಾರ್ ರೈ ತನ್ನ ಹೆಂಡತಿ ರಾಣಿ ಕುಮಾರಿಗೆ ಇನ್ಸ್‌ಸ್ಟಾಗ್ರಾಂ ರೀಲ್ಸ್ ಮಾಡಬೇಡ ಎಂದಿದ್ದಾನೆ. ಅಷ್ಟಕ್ಕೆ ಕೋಪಗೊಂಡ ರಾಣಿ ಕುಮಾರಿ ತನ್ನ ಸಂಬಂಧಿಕನ ಜೊತೆ ಸೇರಿ ಮರ್ಡರ್ ಮಾಡಿದ್ದಾಳೆ ಎನ್ನಲಾಗಿದೆ.
ಮಹೇಶ್ವರ್ ಕುಮಾರ್ ರೈ, ರಾಣಿ ಕುಮಾರಿಯನ್ನು ವಿವಾಹವಾಗಿ 6 ವರ್ಷಗಳೇ ಕಳೆದಿತ್ತು. ಇಬ್ಬರಿಗೂ 5 ವರ್ಷದ ಮಗ ಕೂಡ ಇದ್ದಾನೆ. ಇವರಿಬ್ಬರ ಮಧ್ಯೆ ರೀಲ್ಸ್ ಮಾಡುವ ವಿಷಯಕ್ಕೆ ಜಗಳ ನಡೆಯುತ್ತಿತ್ತು. ಇನ್ಸ್‌ಸ್ಟಾಗ್ರಾಂ ರೀಲ್ಸ್ ಮಾಡೋದನ್ನ ನಿಲ್ಲಿಸು ಎಂದಿದ್ದಕ್ಕೆ ಗಂಡನನ್ನು ಹತ್ಯೆ ಮಾಡಲಾಗಿದೆ ಎಂದು ದೂರು ದಾಖಲಾಗಿದೆ.
ಯಾವಾಗಲೂ ಇನ್ಸ್‌ಸ್ಟಾಗ್ರಾಂ ನೋಡುತ್ತಿದ್ದ ರಾಣಿ ಕುಮಾರಿ ರೀಲ್ಸ್ ಮಾಡುವ ಗೀಳಿಗೆ ಬಿದ್ದಿದ್ದರು. ಇದುವರೆಗೂ 500 ರೀಲ್ಸ್‌ಗಳನ್ನು ಮಾಡಿದ್ದ ರಾಣಿ ಕುಮಾರಿ ಇನ್ಸ್‌ಸ್ಟಾಗ್ರಾಂ ಖಾತೆಗೆ 9,500 ಹಿಂಬಾಲಕರು ಇದ್ದರು. ಇನ್ಸ್‌ಸ್ಟಾಗ್ರಾಂ ರೀಲ್ಸ್ ಮಾಡಲು ಅಡ್ಡಿಯಾಗಿದ್ದಕ್ಕೆ ಗಂಡನ ಕೊಲೆ ಮಾಡಿರೋದು ಎಲ್ಲರಿಗೂ ಆಶ್ಚರ್ಯಕ್ಕೆ ಕಾರಣವಾಗಿದೆ. ಆರೋಪಿಯನ್ನು ವಶಕ್ಕೆ ಪಡೆದಿರೋ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

























