ಪುತ್ತೂರು : ಪುತ್ತೂರು ಬಸ್ ನಿಲ್ದಾಣದಿಂದ ಸಂಜೀವ ಶೆಟ್ಟಿ ಮಳಿಗೆಯವರೆಗೆ ಸಂಚರಿಸುವ ದಾರಿಯಲ್ಲಿ ಇಕ್ಕಟ್ಟು ಎನ್ನುವಂತೆ ನಡೆಯಬೇಕಾಗಿತ್ತು. ದಟ್ಟ ವಾಹನಗಳನ್ನೂ ಎದುರಿಸಿ ಜನ ನಡೆಯುತ್ತಿದ್ದರು.ಫುಟ್ ಪಾತ್ ಇದ್ದರೂ ಅದು ವ್ಯವಸ್ಥಿತ ರೀತಿಯಲ್ಲಿ ಇರಲಿಲ್ಲ.
ಆದರೆ ಇದೀಗ ಪುತ್ತೂರು ಮುಖ್ಯರಸ್ತೆಯಾಗಿ ಸಂಚರಿಸುವ ಸಂಜೀವ ಶೆಟ್ಟಿ ವಸ್ತ್ರ ಮಳಿಗೆಯಿಂದ ಬಸ್ ನಿಲ್ದಾಣದವರೆಗೆ ಸುಂದರವಾದ ಪಾದಾಚಾರಿ ರಸ್ತೆಯ ಕಾಮಗಾರಿ ಭರದಿಂದ ಸಾಗುತ್ತಿದ್ದು, ಇಂಜಿನಿಯರ್ ರಂಜಿತ್ ಬಂಗೇರ ರವರ ಕಾರ್ಯದಿಂದ ಕೆಲವೇ ದಿನಗಳಲ್ಲಿ ಈ ಪಾದಾಚಾರಿ ರಸ್ತೆಯ ನಿರ್ಮಾಣಗೊಳ್ಳಲಿದೆ.