ವಿಟ್ಲ : ಮರಳು ಸಾಗಾಟದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ನರಿಂಗಾನ ಗ್ರಾಮದ ಕೆದಂಬಾಡಿ ಜಂಕ್ಷನ್ ನಲ್ಲಿ ನಡೆದಿದೆ.
ಬಂಟ್ವಾಳ ನರಿಂಗಾನ ನಿವಾಸಿ, ಸಿದ್ಧೀಕ್ ಕೆ.ಎಂ. ಬಂಧಿತ.
ಸಿದ್ಧೀಕ್ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಕ್ರ:126/2017 ಕಲಂ:379 r/w 34 ಐಪಿಸಿ ಪ್ರಕರಣ ದಾಖಲಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದ.
ಜ.8 ರಂದು ರಾತ್ರಿ ವಿಟ್ಲ ಠಾಣಾ ಎ.ಎಸ್.ಐ ಜಯರಾಮ ಹಾಗೂ ಸಿಬ್ಬಂದಿಗಳಾದ ಪುನೀತ್, ಹೇಮರಾಜ್, ಅಶೋಕ್ ರವರು ಬಂಟ್ವಾಳ ತಾಲೂಕು ನರಿಂಗಾನ ಗ್ರಾಮದ ಕೆದಂಬಾಡಿ ಜಂಕ್ಷನ್ ನಲ್ಲಿ ದಸ್ತಗಿರಿ ಮಾಡಿರುತ್ತಾರೆ. ಸಿದ್ಧೀಕ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಯು ತಪ್ಪು ಒಪ್ಪಿಕೊಂಡಿದ್ದು, ನ್ಯಾಯಾಲಯವು ರೂ. 11.000/- ದಂಡವನ್ನು ವಿಧಿಸಿರುತ್ತದೆ.
ಸದ್ರಿ ಪ್ರಕರಣವು ಮರಳು ಸಾಗಾಟದ ಪ್ರಕರಣವಾಗಿದ್ದು, ಆರೋಪಿಯ ಬಗ್ಗೆ ಯಾವುದೇ ದಾಖಲೆ/ ಭಾವಚಿತ್ರ ಇಲ್ಲದೇ ಇದ್ದುದರಿಂದ ದಸ್ತಗಿರಿಗೆ ತೊಡಕಾಗಿದ್ದು, ಲಾರಿಯ ದಾಖಲಾತಿಯ ಬಗ್ಗೆ ಎ.ಎಸ್.ಐ ಜಯರಾಮ ರವರು ಜಿಲ್ಲೆಯ ಆರ್.ಟಿ.ಒ ಕಚೇರಿಗಳಿಂದ ಮತ್ತು ಎಲ್.ಐ.ಸಿ ಕಚೇರಿಯಿಂದ ಆರೋಪಿಗೆ ಸಂಬಂಧ ಪಟ್ಟ ದಾಖಲಾತಿ ಮತ್ತು ಭಾವಚಿತ್ರವನ್ನು ಸಂಗ್ರಹಿಸಿ ಆರೋಪಿಯ ಬಗ್ಗೆ ಮಾಹಿತಿ ಕಲೆಹಾಕಿರುತ್ತಾರೆ.