ಕ್ರಿಕೆಟ್ ಆಡುತ್ತಿದ್ದ ಸಂದರ್ಭ 36 ವರ್ಷದ ಟೆಕ್ಕಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪಂದ್ಯ ವೇಳೆ ಮೈದಾನದಲ್ಲೇ ಟೆಕ್ಕಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಮೈದಾನದಲ್ಲೇ ಸಾವನ್ನಪ್ಪಿದ ವ್ಯಕ್ತಿಯನ್ನು ವಿಕಾಸ್ ನೇಗಿ ಎಂದು ಗುರುತಿಸಲಾಗಿದೆ.
ವಿಕಾಸ್ ನೇಗಿ ಉತ್ತರಾಖಂಡ ಮೂಲದವರಾಗಿದ್ದು, ತನ್ನ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುವ ವೇಳೆ ಹೃದಯಾಘಾತ ಸಂಭವಿಸಿ ಮೈದಾನದಲ್ಲಿ ಕೊನೆಯುಸಿರೆಳೆದಿದ್ದಾರೆ. ನೆಲಕ್ಕೆ ಬಿದ್ದ ವಿಕಾಸ್ ನೇಗಿಯನ್ನು ಕಂಡು ಆತನ ಸ್ನೇಹಿತರು ಧಾವಿಸಿ ಆಸ್ಪತ್ರೆ ಸಾಗಿಸಲು ಯತ್ನಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ವಿಕಾಸ್ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಈ ದೃಶ್ಯ ಕಂಡು ಸ್ಪರ್ಧಿಗಳು ಶಾಕ್ ಆಗಿದ್ದಾರೆ. ಮಾತ್ರವಲ್ಲದೆ ವಿಕಾಸ್ ಕೊನೆಯ ದೃಶ್ಯ ಕ್ಯಾಮರಾದಲ್ಲೂ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.


























