ಬೆಂಗಳೂರು : 2023 ನವೆಂಬರ್ನಲ್ಲಿ ನಡೆದ ಹಿರಿಯ ಗಣಿ ಮತ್ತು ಭೂವಿಜ್ಞಾನಿ ಕೆ.ಎಸ್.ಪ್ರತಿಮಾ ಬರ್ಬರ ಹತ್ಯೆ ಪ್ರಕರಣವು ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿತ್ತು. ತನಿಖೆಯನ್ನು ಕೈಗೆತ್ತಿಕೊಂಡಿದ್ದ ತಲಘಟ್ಟಪುರ ಪೊಲೀಸರು ಎರಡೇ ತಿಂಗಳಲ್ಲಿ ವಿಚಾರಣೆ ಅಂತ್ಯಗೊಳಿಸಿದ್ದಾರೆ.
ಸ್ನೇಹಿತರೇ ಹೈವಿಟ್ನೆಸ್..!
ಇದೀಗ ಚಾರ್ಜ್ಶೀಟ್ ರೆಡಿ ಮಾಡಿದ್ದು, ಇನ್ನೆರಡು ದಿನಗಳಲ್ಲಿ ಕೋರ್ಟ್ಗೆ ವರದಿ ಸಲ್ಲಿಸಲಿದ್ದಾರೆ. ಮಾಹಿತಿ ಪ್ರಕಾರ, 500ಕ್ಕೂ ಹೆಚ್ಚು ಪುಟಗಳ ಚಾರ್ಜ್ಶೀಟ್ ಸಿದ್ಧಪಡಿಸಿಕೊಂಡಿದ್ದಾರೆ. ಅರವತ್ತಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆ ಪಡೆದಿದ್ದು, ಹತ್ತು ಮಂದಿಯ ಹೈವಿಟ್ನೆಸ್ ಸಾಕ್ಷಿಗಳ ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದೆ.
ಕೆಲಸದಿಂದ ತೆಗೆದ ವಿಚಾರಕ್ಕೆ ಆರೋಪಿ ಕಿರಣ್ ಕೊಲೆ ಮಾಡಿರೋದು ಬೆಳಕಿಗೆ ಬಂದಿದೆ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖ ಮಾಡಿದ್ದಾರೆ. ಕೊಲೆ ಮಾಡಿ ಐದು ಲಕ್ಷ ಹಣದ ಜೊತೆಗೆ ಚಿನ್ನಾಭರಣವನ್ನು ಕಳ್ಳತನ ಮಾಡಿದ್ದಾನೆ. ಕದ್ದ ಹಣವನ್ನು ಸ್ನೇಹಿತ ಶಿವುಗೆ ಕೊಟ್ಟು ಮಲೆಮಹದೇಶ್ವರ ದೇವಸ್ಥಾನಕ್ಕೆ ಹೋಗಿದ್ದ. ಜೊತೆಗೆ ಕೆಲಸ ಮಾಡ್ತಿದ್ದ ಇಬ್ಬರು ಸಿಬ್ಬಂದಿ ಸೇರಿ ಆರೋಪಿ ಕಿರಣ್ನ ಸ್ನೇಹಿತರನ್ನೇ ಹೈವಿಟ್ನೆಸ್ ಮಾಡಲಾಗಿದೆ ಎನ್ನಲಾಗಿದೆ.
ಹೆಂಡತಿ ಮನೆ ಬಿಟ್ಟು ಹೋಗಿದ್ದಳು..!
ಇನ್ನು ಟೆಕ್ನಿಕಲ್ ಎವಿಡೆನ್ಸ್ ಕಲೆ ಹಾಕಿರೋ ಪೊಲೀಸರು, ಚಾಲಕನಾಗಿದ್ದ ಕಿರಣ್ನನ್ನ ಕೆಲಸದಿಂದ ತೆಗೆದು ಹಾಕಿದ್ರಿಂದ ಕೋಪಗೊಂಡಿದ್ದ. ಆರೋಪಿ ಪತ್ನಿ ಬಳಿ ಸರ್ಕಾರಿ ಕೆಲಸ ಅಂತೇಳಿದ್ದು, ನಿಜ ತಿಳಿದ ಮೇಲೆ ಪತ್ನಿ ಮನೆ ಬಿಟ್ಟು ಹೋಗಿದ್ದಳು. ಇದರಿಂದ ಕೆಲಸ ಕೊಟ್ಟರೆ ಒಕೆ, ಇಲ್ಲದಿದ್ದರೆ ಕೊಲೆ ಮಾಡಿ ಹಣ ದೋಚುವ ಪ್ಲಾನ್ ಮಾಡಿದ್ದೆ ಎಂದು ಪೊಲೀಸರ ತನಿಖೆ ವೇಳೆ ಸತ್ಯ ಬಾಯ್ಬಿಟ್ಟಿದ್ದಾನೆ ಅಂತಾ ಹೇಳಲಾಗಿದೆ.
ಕೆಲಸದ ವಿಚಾರ ಬಿಟ್ಟು ಯಾವುದೇ ಗಣಿ ವಿಚಾರ ಸಮಸ್ಯೆಗಳಿಲ್ಲದಿರೋದು ತನಿಖೆಯಿಂದ ಗೊತ್ತಾಗಿದೆ. ನವೆಂಬರ್ 5 ರಂದು ಬೆಂಗಳೂರಿನ ಸುಬ್ರಮಣ್ಯಪುರದ ಮನೆಯಲ್ಲಿ ಕೊಲೆ ಆಗಿತ್ತು. ಸಿಸಿಕ್ಯಾಮರಾಗಳಿಲ್ಲದಿದ್ರೂ ಟವರ್ ಲೋಕೇಷನ್ ಮೂಲಕ ಬಲೆ ಬೀಸಿ ಆರೋಪಿಯನ್ನು ಬಂಧಿಸಿದ್ದರು.

























