ಬಂಟ್ವಾಳ : ವ್ಯಕ್ತಿಯೋರ್ವರ ಮೇಲೆ ಅರ್ಜಿಯ ವಿಚಾರವಾಗಿ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕು ಕುಡಂಬೆಟ್ಟು ನಿವಾಸಿ ರಂಜಿತ್ ನೀಡಿರುವ ದೂರಿನ ಮೇರೆಗೆ ಹರಿಶ್ಚಂದ್ರ ಶೆಟ್ಟಿ, ಗೋಪಾಲ ಚೌಟ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ರಂಜಿತ್ ಜ.11 ರಂದು ಬೆಳಿಗ್ಗೆ ಪಿಲಿಮೊಗರುವಿನ ಹಾಲಿನ ಡೈರಿಗೆ ಹಾಲನ್ನು ನೀಡಲು ತೆರಳಿದ್ದು,ಈ ಸಂದರ್ಭದಲ್ಲಿ ಅರ್ಜಿ ಒಂದರ ವಿಚಾರವಾಗಿ ಹಾಲಿನ ಡೈರಿಯ ಸಿಬ್ಬಂದಿಯಾದ ಗುರುಪ್ರಸಾದ್ ಭಟ್ ರವರಲ್ಲಿ ಚರ್ಚಿಸಿದ್ದು, ಆ ವೇಳೆ ಅಲ್ಲಿಯೇ ಇದ್ದ ಇನ್ನೊರ್ವ ಸಿಬ್ಬಂದಿಯಾದ ಹರಿಶ್ಚಂದ್ರ ಶೆಟ್ಟಿ ಹಾಗೂ ಸೋಸೈಟಿಯ ಅದ್ಯಕ್ಷರಾದ ಗೋಪಾಲ ಚೌಟ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ಮತ್ತು ಗೋಪಾಲ ಚೌಟ ಪೈಬರ್ ಕೋಲಿನಿಂದ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಿರುತ್ತಾರೆ
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂಬ್ರ 05/2024 ಕಲಂ : 323, 324, 504, ಜೊತೆ 34 ಭಾ ದಂ ಸಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


























