ಪುತ್ತೂರು : ಮೋಂತ್ರಾ ಇಲೆಕ್ಟ್ರಿಕ್ ಅಧಿಕೃತ ಡೀಲರ್ ‘TANIYA MOTORS’ ನ ಸೂಪರ್ ಆಟೋ ಶೋರೂಂ ಉದ್ಘಾಟನಾ ಸಮಾರಂಭವು ಜ.14 ರಂದು ದಾರಂದಕುಕ್ಕು ಡಿಕೆ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ.
ಶಾಸಕ ಅಶೋಕ್ ಕುಮಾರ್ ರೈ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ.
ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯ ರವರು ದೀಪ ಬೆಳಗಿಸಲಿದ್ದಾರೆ.
ನಗರಸಭೆ ಮಾಜಿ ಅಧ್ಯಕ್ಷರಾದ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೇಶವ ಭಂಡಾರಿ ಬೆಳ್ಳಿಪ್ಪಾಡಿ, ಕೈಪ, ಶಕ್ತಿನಗರ ಕೆನರಾ ಬ್ಯಾಂಕ್ ಮ್ಯಾನೇಜರ್ ಪ್ರವೀರ್ ವಿ.ಬಿ., ಶ್ರೀ ಡೆವೆಲಪರ್ಸ್ ನ ಗಿರೀಶ್ ಎಂ. ಶೆಟ್ಟಿ, ವಕೀಲರಾದ ರಾಘವೇಂದ್ರ ರಾವ್, ಪೈ ಸೇಲ್ಸ್ ನ ಎಂ.ಡಿ. ಟಿ. ರತ್ನಾಕರ್ ಪೈ, ಬನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಮಿತಾ ಎನ್., ಹೇಮಾನಾಥ್ ಶೆಟ್ಟಿ ಕಾವು, ಕೆಮ್ಮಾಯಿ ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಎ.ಕೆ. ಬಶೀರ್ ಹಾಜಿ, ಪೊಲೀಸ್ ಇನ್ಸ್ಪೆಕ್ಟರ್ ಸುನೀಲ್ ಕುಮಾರ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.




























