ಚಿತ್ರದುರ್ಗ : ಶ್ವಾನದ ಮಾಲೀಕರು ತಮ್ಮ ಪ್ರೀತಿಯ ಸಾಕು ನಾಯಿಗೆ ಮನುಷ್ಯರಂತೆ ಸೀಮಂತ ಕಾರ್ಯ ಮಾಡುವ ಮೂಲಕ ಸಾಕು ಪ್ರಾಣಿಗಳೂ ಕೂಡ ತಮ್ಮ ಕುಟುಂಬದ ಸದಸ್ಯರು ಎಂಬ ಸಂದೇಶ ಸಾರಿದ್ದಾರೆ.
ಜಿಲ್ಲೆ ಹೊಸದುರ್ಗ ತಾಲೂಕಿನ ಕರ್ಪೂರದ ಕಟ್ಟೆ ಗ್ರಾಮದ ಅಜಯ್ ಹಾಗೂ ಜ್ಯೋತಿ ಶ್ವಾನವೊಂದನ್ನ ತಂದು ಸಾಕಿದ್ದರು. ಶ್ವಾನ ರೂಬಿಗೆ ಅರಿಶಿನ ಕುಂಕುಮ ಇಟ್ಟು, ಹೂವು ಮುಡಿಸಿ, ಹಣ್ಣುಗಳಿಂದ ಉಡಿ ತುಂಬಿ ಆರತಿ ಬೆಳಗಿದ್ದಾರೆ.

ಇನ್ನೂ ಕುಟುಂಬದ ಸದಸ್ಯರು ಸೇರಿದಂತೆ ಅಕ್ಕ ಪಕ್ಕದ ಮಹಿಳೆಯರು ಸೇರಿ ಕೇಕ್ ಕತ್ತರಿಸಿ ತಮ್ಮ ಪ್ರೀತಿಯ ನಾಯಿಯ ಸೀಮಂತ ಕಾರ್ಯ ನೆರವೇರಿಸಿದ್ದಾರೆ.


























