ಪುತ್ತೂರು : ಆರಂಭದ ಒಂದು ಮಳೆಗೆ ಕೊಡೆ ಹರಿದಂತೆ ಎಂಬ ಗಾದೆಯಂತೆ ಶಾಸಕರಾಗಿ ಮೊದಲ ಅರ್ಧ ವರ್ಷದಲ್ಲಿಯೇ ಈ ಹಿಂದಿನ ಶಾಸಕರು ತಂದಿರುವ ಅನುದಾನದ ಕಾಮಗಾರಿಯು ಶಿಲಾನ್ಯಾಸವಾಗಿ ಕೆಲಸ ಪ್ರಗತಿಯಲ್ಲಿರುವಾಗಲೇ ಹಾಲಿ ಶಾಸಕರು ಮತ್ತೊಮ್ಮೆ ಶಂಕುಸ್ಥಾಪನೆ ಮಾಡುತ್ತಾ ಇರುವುದು ಜನಸಾಮಾನ್ಯರ ನಡುವಿನಲ್ಲಿ ನಗೆಪಾಟಲಿಗೀಡಾಗಿರುವುದಂತು ಸತ್ಯ ಎಂದು ಪುತ್ತೂರು ಗ್ರಾಮಾಂತರ ಮಂಡಲದ ಪದಾಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷರಾದ ರಾಧಕೃಷ್ಣ ಆಳ್ವ ಹೇಳಿದರು.
ಪುತ್ತೂರು ಕ್ಷೇತ್ರಾದ್ಯಂತ ಈಗ ನಡೆಯುತ್ತಿರುವ ಎಲ್ಲಾ ಕಾಮಗಾರಿಗಳು ಅದರಲ್ಲಿಯೂ ಉಪ್ಪಿನಂಗಡಿಯ ದ್ವಿಪದ ರಸ್ತೆಯಾಗಿರಲಿ., ಬಿಳಿಯೂರುಕಟ್ಟೆ-ಸಾಜ-ಕುದ್ದುಪದವು ರಸ್ತೆಯ ಕಾಮಗಾರಿಯಾಗಿರಲಿ.., ಎಲ್ಲವೂ ಕೂಡ ಬಿಜೆಪಿ ಸರಕಾರ ಇರುವಾಗ ಬಂದಿರುವಂತ ಅನುದಾನಗಳು ಆದರೆ ಹಾಲಿ ಶಾಸಕರು ಹೋದಲ್ಲಿ ಎಲ್ಲಾ ಮಾಜಿ ಶಾಸಕರನ್ನು ಅವಹೇಳನಕಾರಿಯಾಗಿ ಮಾತಾನಾಡುವುದು ಮತ್ತು ಜನರಿಗೆ ಸುಳ್ಳು ಮಾಹಿತಿಯನ್ನು ನೀಡುವುದು ಘನತೆಗೆ ತಕ್ಕುದಲ್ಲ ಎಂದು ಹೇಳಿದರು.
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆಯ ಅಂಗವಾಗಿ ಜನವರಿ14ರಿಂದ 21ರವರೆಗೆ ದೇವಸ್ಥಾನ, ದೈವಸ್ಥಾನ, ಮಠ ಮಂದಿರಗಳ ಸ್ವಚ್ಛತೆಯಲ್ಲಿ ಕಾರ್ಯಕರ್ತರು ,ಪದಾಧಿಕಾರಿಗಳು ಭಾಗವಹಿಸಬೇಕು ಮತ್ತು ಜ.22 ಪ್ರತಿಷ್ಠಾ ದಿನದಂದು ಎಲ್ಲಾ ಹಿಂದೂ ಮನೆಗಳಲ್ಲಿ ಪ್ರಧಾನಿಯವರ ಆಶಯದಂತೆ ದೀಪ ಬೆಳಗಿಸುವಂತೆ ಈ ಸಂದರ್ಭದಲ್ಲಿ ವಿನಂತಿಸಿದರು.
ಮಂಡಲದ ಪ್ರ.ಕಾರ್ಯದರ್ಶಿ ನಿತೀಶ್ ಶಾಂತಿವನ ಸ್ವಾಗತಿಸಿದರು.
ಮಂಡಲ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್ , ಮುಕುಂದ ಬಜತ್ತೂರು, ಅರುಣ್ ವಿಟ್ಲ, ಮೀನಾಕ್ಷಿ ಮಂಜುನಾಥ್,ಉಷಾ ಮುಳಿಯ,ವಿಜಯ ಕೋರಂಗ, ಖಜಾಂಜಿ ರಮೇಶ್ ಭಟ್, ಕಾರ್ಯದರ್ಶಿ ರಮಣಿ ಗಾಣಿಗ, ಲೋಹಿತ್ ಅಮ್ಚಿನಡ್ಕ, ವಿವಿಧ ಮೋರ್ಚಾ ಅಧ್ಯಕ್ಷ ಕಾರ್ಯದರ್ಶಿಗಳಾದ ಯಶಸ್ವಿನಿ ಶಾಸ್ತ್ರಿ, ಯಶೋಧ ಗೌಡ, ಸುರೇಶ್ ಕಣ್ಣರಾಯ, ಪುನೀತ್ ಮಾಡತ್ತಾರು, ನವೀನ್ ಪಡ್ನೂರು,ಸುನೀಲ್ ದಡ್ಡು, ಮಹಾಶಕ್ತಿ ಕಾರ್ಯದರ್ಶಿಗಳಾದ ಸುರೇಶ್ ಅತ್ರಮಜಲು, ದಯಾನಂದ ಶೆಟ್ಟಿ ಉಜ್ರೆಮಾರು ಮೊದಲಾದವರು ಉಪಸ್ಥಿತರಿದ್ದರು.
ಮಂಡಲ ಪ್ರ.ಕಾರ್ಯದರ್ಶಿ ಪುರುಷೋತ್ತಮ ಮಂಗ್ಲಿಮನೆ ಧನ್ಯವಾದ ಸಲ್ಲಿಸಿದರು.

























