ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿಯ 13 ನಿರ್ದೇಶಕರ ಸ್ಥಾನಗಳಿಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೇ.77.05 ಮತಚಲಾವಣೆಯಾಗಿದೆ.
ಪರಿಯಾಲಡ್ಕದ ಅನುದಾನಿತ ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಚುನಾವಣೆ ನಡೆಯಿತು.

1350 ಮಂದಿ ಸದಸ್ಯರು ಮತ ಚಲಾಯಿಸಿದ್ದು, ಬಳಿಕ ನಡೆದ ಮತ ಎಣಿಕೆಯಲ್ಲಿ ಎಲ್ಲಾ 13 ಸ್ಥಾನಗಳಲ್ಲಿ ಸಹಕಾರ ಭಾರತೀಯ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಸಹಕಾರ ಭಾರತಿಯಿಂದ ಹಾಗೂ ಕಾಂಗ್ರೆಸ್ ನಿಂದ 13
ಸ್ಥಾನಕ್ಕೂ ಅಭ್ಯರ್ಥಿಗಳು ಸ್ಪರ್ಧಿಸಿದರೆ, 4 ಬಿಜೆಪಿ ಬಂಡಾಯ
ಅಭ್ಯರ್ಥಿಗಳೂ ಸೇರಿ 6 ಮಂದಿ ಪಕ್ಷೇತರ ಅಭ್ಯರ್ಥಿಗಳಾಗಿ
ಕಣದಲ್ಲಿದ್ದರು.
ಕುತೂಹಲಕಾರಿ ಫಲಿತಾಂಶ ನೀಡಬಹುದೆಂದು
ಊಹಿಸಿದ್ದರೂ, ಕೊನೆ ಕ್ಷಣದಲ್ಲಿ ಎಲ್ಲಾ 13 ಸ್ಥಾನಗಳನ್ನು
ಸಹಕಾರಿ ಭಾರತಿಯ ಬೆಂಬಲಿತ ಅಭ್ಯರ್ಥಿಗಳು ಗೆದ್ದು
ಬೀಗಿದ್ದಾರೆ.


























