ಬೆಳ್ತಂಗಡಿ : ಮಗ ಆತ್ಮಹತ್ಯೆ ಮಾಡಿಕೊಂಡ 13ನೇ ದಿನಕ್ಕೆ ತಂದೆ ಕೂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದಲ್ಲಿ ನಡೆದಿದೆ.
ಪೆರ್ಲ ನಿವಾಸಿ ಯೊಗೀಶ್ ಪೂಜಾರಿ (41) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಜ.4ರಂದು ಯೊಗೀಶ್ ಮತ್ತು ರೇಷ್ಮಾ ದಂಪತಿಗಳ ಪುತ್ರ ಯಕ್ಷಿತ್ (14) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನು. ಮಗನ ಉತ್ತರ ಕ್ರಿಯೆ ಜ.14 ಭಾನುವಾರದಂದು ನಡೆದಿತ್ತು. 8ನೇ ತರಗತಿ ಬಾಲಕ ಮನೆಯಲ್ಲಿ ಸೂಸೈಡ್ ಮಾಡಿಕೊಂಡಿದ್ದನು.
ಯಕ್ಷಿತ್ ಆತ್ಮಹತ್ಯೆಗೆ ತಮ್ಮನ ಜೊತೆ ನಡೆದ ಗಲಾಟೆ ಕಾರಣ ಎನ್ನಲಾಗಿತ್ತು. ಆರು ವರ್ಷದ ತಮ್ಮನ ಜೊತೆ ಈ ಹಿಂದೆ ಕೂಡ ಗಲಾಟೆ ನಡೆದಿತ್ತು. ಈ ಗಲಾಟೆಯಲ್ಲಿ ತಮ್ಮ ಯಕ್ಷಿತ್ ಹೊಟ್ಟೆ ಮೇಲೆ ಕಚ್ಚಿ ಗಾಯ ಮಾಡಿದ್ದನು ಇದರಿಂದ ಮನನೊಂದು ಅಣ್ಣ., ತಮ್ಮನ ಎದುರೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಯಕ್ಷಿತ್ ಉಜಿರೆ ಖಾಸಗಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದನು. ಮನೆಯ ರೂಂ ನಲ್ಲಿ ತಾಯಿಯ ಸೀರೆ ಬಳಸಿ ನೇಣು ಬಿಗಿದುಕೊಂಡಿದ್ದನು. ತಂದೆ -ತಾಯಿ ಕೆಲಸಕ್ಕೆ ಹೋದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದನು.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮಗನ ಆತ್ಮಹತ್ಯೆ ಪ್ರಕರಣ ದಾಖಲಾಗಿತ್ತು. ಇದೀಗ ಮಗ ಯಕ್ಷಿತ್ ಸಾವನ್ನಪ್ಪಿದ 13ನೇ ದಿನಕ್ಕೆ ತಂದೆ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


























