ಬಂಟ್ವಾಳ : ಸಾಮಾಜಿಕ ಜಾಲತಾಣದಲ್ಲಿ ಬಂದ ಹೂಡಿಕೆ ಜಾಹೀರಾತು ನೋಡಿ ಲಿಂಕ್ ಮೂಲಕ ಗ್ರೂಪ್ ಸೇರಿಕೊಂಡು ಲಕ್ಷಾಂತರ ರೂ. ವಂಚನೆಗೆ ಒಳಗಾದ ಬಗ್ಗೆ ಸಿ.ಇ.ಎನ್. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ನಿವಾಸಿ ವಿಷ್ಣುಮೂರ್ತಿ ವಂಚನೆಗೊಳಗಾದ ವ್ಯಕ್ತಿ.
ವಿಷ್ಣುಮೂರ್ತಿ ಅವರು ಡಿ.29 ರಂದು ಫೇಸ್ಬುಕ್ ನಲ್ಲಿ ಶೇರ್ ಮಾರ್ಕೆಟ್ ಹೂಡಿಕೆ ಬಗ್ಗೆ ಬಂದ ಜಾಹೀರಾತು ನೋಡಿ ಅದರಲ್ಲಿದ್ದ ಲಿಂಕ್ ಮೂಲಕ ವಾಟ್ಸಾಪ್ ಗ್ರೂಪ್ ಗೆ ಸೇರ್ಪಡೆಯಾಗಿರುತ್ತಾರೆ.
ಸದ್ರಿ ಗ್ರೂಪ್ ನಲ್ಲಿ ಸೂಚಿಸಿದಂತೆ, ಆಪ್ ಡೌನ್ಲೋಡ್ ಮಾಡಿ ಅದರಲ್ಲಿ ಅವರ ಪತ್ನಿಯ ಹೆಸರಿನಲ್ಲಿ ಟ್ರೇಡಿಂಗ್ ಖಾತೆ ತೆರೆದು, ಅದಕ್ಕೆ ಅವರ ಹಾಗೂ ಅವರ ಪತ್ನಿಯ ಆಧಾರ್ ಕಾರ್ಡ್, ಮೊಬೈಲ್ ನಂಬ್ರ, ಬ್ಯಾಂಕ್ ವಿವರವನ್ನು ನೀಡಿದ್ದು, ಬಳಿಕ ಅಪರಿಚಿತ ವ್ಯಕ್ತಿಗಳು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ರೂ. 11,14,400/- ಹಣವನ್ನು ಪಾವತಿಸಿದ್ದು, ಅದರಲ್ಲಿ ರೂ.55,000 ಖಾತೆಗೆ ಮರುಜಮೆಯಾಗಿರುತ್ತದೆ.
ಬಾಕಿ ಹಣವನ್ನು ಹಿಂತಿರುಗಿಸದೆ ವಂಚಿಸಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅ.ಕ್ರ: 01/2024 ಕಲಂ: 66(C),66(D), IT act 420 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

























