ಬೆಂಗಳೂರು : ಹಿಟ್ ಅಂಡ್ ರನ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರ ತರಲು ಉದ್ದೇಶಿಸಿರುವ ಕಾಯ್ದೆ ವಿರುದ್ಧ ವಾಹನ ಚಾಲಕರು ಹಾಗೂ ಮಾಲೀಕರು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ.
ಹೋರಾಟದ ರೂಪುರೇಷೆ ಕುರಿತು ಪೂರ್ವಭಾವಿ ಸಭೆ ನಡೆಸಿ ಚರ್ಚೆ ಮಾಡಲಾಗಿದೆ. ಬೇಡಿಕೆ ಈಡೇರುವವರೆಗೂ ಹೋರಾಟಕ್ಕೆ ನಿರ್ಧಾರ ಮಾಡಿದ್ದಾರೆ. ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ 10 ವರ್ಷ ಜೈಲು, ಏಳು ಲಕ್ಷ ದಂಡದ ಕಾನೂನಿಗೆ ವಿರೋಧಿಸಿ ಲಾರಿ ಮುಷ್ಕರ ಹಮ್ಮಿಕೊಳ್ಳುತ್ತಿದ್ದಾರೆ.
ಇ-ಚಲನ್ ಕಾಯ್ದೆ ಲಾರಿ ಮಾಲಕರಿಗೆ ಮಾರಕ ಅಂತ ಆಕ್ರೋಶ ವ್ಯಕ್ತ ಡಿಸಿದ್ದಾರೆ. ಹೈಟ್ ಮತ್ತು ಡೋರ್ ಓಪನ್ಗೆ ಇದ್ದ 500 ರೂಪಾಯಿ ದಂಡ 20 ಸಾವಿರಕ್ಕೆ ಏರಿಕೆ ಖಂಡಿಸಿಯೂ ಮುಷ್ಕರಕ್ಕೆ ಕರೆ ನೀಡಲಾಗಿದೆ.
ಬೇಡಿಕೆಗಳು ಏನೇನು..!!?
- ಗಡಿ ಭಾಗದ ಸಾರಿಗೆ ಇಲಾಖೆ ಚೆಕ್‌ಪೋಸ್ಟ್ ತೆರವು
- ಹೆಚ್ಚುವರಿ ಪ್ರೊಜೆಕ್ಷನ್ ದಂಡ ಇಳಿಕೆ ಮಾಡಬೇಕು
- ಕಪ್ಪುಪಟ್ಟಿಯಲ್ಲಿರುವ ವಾಣಿಜ್ಯ ವಾಹನಗಳಿಗೆ ಎಫ್ಸಿ ಮತ್ತು ಪರ್ಮಿಟ್ ನವೀಕರಣಕ್ಕೆ ಅನುಮತಿ
- ಅಪಘಾತದ ವೇಳೆ ಪೊಲೀಸರು ಚಾಲನಾ ಪತ್ರ ವಶಪಡಿಸಿಕೊಳ್ಳಬಾರದು
- ಹೊರರಾಜ್ಯ ವಾಹನಗಳ ಅಪಘಾತವಾದಾಗ ಬಿಡುಗಡೆಗೆ ಸ್ಥಳೀಯ ವ್ಯಕ್ತಿಗಳ ಭದ್ರತೆ, ಜಾಮೀನು ಕೇಳಬಾರದು


























