ಬೆಂಗಳೂರು : ಪ್ರಯಾಣಿಕನೋರ್ವ ವಿಮಾನದ ಟಾಯ್ಲೆಟ್ ನಲ್ಲಿ ಸಿಲುಕಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮುಂಬೈನಿಂದ ಬೆಂಗಳೂರಿಗೆ ಬಂದ ಸ್ಪೈಸ್ ಜೆಟ್ ವಿಮಾನದಲ್ಲಿ ಪ್ರಯಾಣಿಕ ಸಿಲುಕಿಕೊಂಡಿದ್ದಾನೆ.
ವಿಮಾನ ಟೇಕಾಫ್ ಆದಾಗ ಟಾಯ್ಲೆಟ್‌ಗೆ ಹೋದ ಪ್ರಯಾಣಿಕ ಅಲ್ಲೇ ಬಾಕಿಯಾಗಿದ್ದಾನೆ. ಒಳಗಿನಿಂದ ಬಾಗಿಲು ತೆಗೆಯಲಾಗದೆ ಪ್ರಯಾಣಿಕ ಅಲ್ಲೇ ಸಿಲುಕಿದ್ದಾನೆ. ಗಗನಸಖಿಯರು ಟಾಯ್ಲೆಟ್ ಒಳಗೆ ಸಿಲುಕಿಕೊಂಡ ವ್ಯಕ್ತಿಗೆ ಭಯಪಡದೇ ಧೈರ್ಯವಾಗಿರುವಂತೆ ಹೇಳಿದ್ದಾರೆ. ಚೀಟಿ ಬರೆದು ಪ್ರಯಾಣಿಕನಿಗೆ ನೀಡಿ ಧೈರ್ಯ ತುಂಬಿಸಿದ್ದಾರೆ.
ಅತ್ತ ವಿಮಾನ ಬೆಂಗಳೂರಿನಲ್ಲಿ ಲ್ಯಾಂಡಿಂಗ್ ಆದ ಬಳಿಕ ಪ್ರಯಾಣಿಕ ಡೋರ್ ತೆಗೆದು ಹೊರ ಬಂದಿದ್ದಾನೆ. ಡೋರ್ ಲಾಕ್ ನಲ್ಲಿ ಸಮಸ್ಯೆ ಇದ್ದಿದ್ದರಿಂದ ಟಾಯ್ಲೆಟ್ ಒಳಗಡೆಯೇ ಸಿಲುಕಿಕೊಂಡಿದ್ದನು. ವಿಮಾನ ಲ್ಯಾಂಡಿಂಗ್ ಆದ ಬಳಿಕ ಇಂಜಿನಿಯರ್ ಬಂದು ಡೋರಿ ರಿಪೇರಿ ಮಾಡಿದ್ದಾರೆ. 2 ಗಂಟೆಗಳ ಡೋರ್ ರಿಪೇರಿ ಬಳಿಕ ಪ್ರಯಾಣಿಕ ವಿಮಾನದಿಂದ ಹೊರಬಂದಿದ್ದಾನೆ.
ಟಾಯ್ಲೆಟ್ನಲ್ಲಿ ಸಿಲುಕಿಕೊಂಡಿದ್ದ ಪ್ರಯಾಣಿಕ ಹೊರಗೆ ಬಂದಂತೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಳಿಕ ಆತನನ್ನು ಮನೆಗೆ ಕಳಿಸಿದ್ದಾರೆ.


























