ಪುತ್ತೂರು : ಎರಡೂವರೆ ವರ್ಷದಲ್ಲೇ ಸಂಗೀತ ಎಂಬ ಲೋಕಕ್ಕೆ ಏರಿದ ಈ ಪುಟ್ಟ ಬಾಲೆ ತೊದಲು ನುಡಿಯುವ ವಯಸ್ಸಿನಲ್ಲೇ 20 ಪದ್ಯಗಳನ್ನು ಹಾಡಿ “ಬುಕ್ ಆಫ್ ರೆಕಾರ್ಡ್” ನಲ್ಲಿ ಹೆಸರನ್ನು ಗಿಟ್ಟಿಸಿಕೊಂಡಿದ್ದಾರೆ.ಈ ಪುಟ್ಟ ಬಾಲೆ 112 ಮೇಡಲ್ಸ್ ಹಾಗೂ ಟ್ರೊಫಿಯನ್ನು ಪಡೆದುಕೊಂಡಿದ್ದಾರೆ.
ಪುತ್ತೂರು ತಾಲೂಕಿನ ಕೊಂಬಾರು ಗ್ರಾಮದ ಕಟ್ಟೆ ಇಡ್ಯಡ್ಕದ ಗುರುರಾಜ್ ಹಾಗೂ ರೇಖಾ ದಂಪತಿಗಳ ಪುತ್ರಿ ಜ್ಞಾನ. ಮಗುವಿಗೆ ಮೊದಲ ದೇವರು ತಾಯಿ ಎಂದ ಹಾಗೇ, ಮೊದಲು ಮಗು ತೊದಳು ಮಾತನಾಡುತ್ತ ಅಮ್ಮ ಎಂದು ಕರೆಯುವಾಗ ತಾಯಿಗೆ ಎಲ್ಲಿಲ್ಲದ ಖುಷಿ. ಹಾಗೆಯೇ ಜ್ಞಾನನ ತಾಯಿ ಸಂಗೀತ ಟೀಚರ್ ಆಗಿದ್ದ ಕಾರಣ ತನ್ನ ಮಗಳಿಗೆ ಸಂಗೀತ ಎಂಬ ಅಕ್ಷರ ಮಾಲೆಗಳನ್ನು ಹೇಳಿ ಕೊಡುತ್ತ ಇದ್ದ ಸಮಯದಲ್ಲೇ ಸಂಗೀತದ ಸ್ವರಗಳು ತಾನಾಗಿಯೇ ಬರುತ್ತಿತ್ತು. ಬುಕ್ ಆಫ್ ರೆಕಾರ್ಡ್ ಆಗಬೇಕಾದರೆ ಸಣ್ಣ ವಿಷಯವಲ್ಲ. ಈಕೆಯ ತಾಯಿ ತುಂಬಾ ಸಮಯಗಳ ಕಾಲ ರಾತ್ರಿ ಹಗಲು ಎನ್ನದೆ ಪ್ರಯತ್ನಗಳನ್ನುಪಡುತ್ತಾ ತನ್ನ ಮಗಳು ಬುಕ್ ಆಫ್ ರೆಕಾರ್ಡ್ ಆಗಬೇಕೆಂದು ಹಲವಾರು ಜನರ ಜೊತೆ ಕೇಳಿ ತಿಳಿದುಕೊಂಡು ತುಂಬಾ ಕಷ್ಟ ಪಟ್ಟಿದ್ದಾರೆ. ಇವರಿಗೆ ಚೆನ್ನಪಟ್ಟಣದ ದರ್ಶನ್ ಹಾಗೂ ಅವರ ಸಹೋದರಿ ತುಂಬಾನೇ ಸಹಾಯ ಮಾಡಿದ್ದು, ಈ ಸಮಯದಲ್ಲಿ ಅವರಿಗೂ ಧನ್ಯವಾದಗಳನ್ನು ಹೇಳಿದ್ದಾರೆ. ಆ ಕಷ್ಟಗಳ ಪ್ರತಿಫಲ ಇಂದು ಎಲ್ಲಿಲ್ಲದ ಖುಷಿಯ ಸಂಭ್ರಮವನ್ನೇ ನೀಡಿದೆ.