ಪುತ್ತೂರು : ಮಹಿಳೆಯೋರ್ವರು ಮನೆಯ ಬಳಿಯ ನೀರಿನ ತೊಟ್ಟಿಗೆ ಬಿದ್ದು, ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಮಹಿಳೆ ಶುಭಲಕ್ಷ್ಮೀ ರವರ ಪತಿ ಪ್ರಕಾಶ್ ಚಂದ್ರ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಒಳಮೊಗ್ರು ಗ್ರಾಮ ಕೈಕಾರ ನಿವಾಸಿ ಪ್ರಕಾಶ್ ಚಂದ್ರ ಎಂಬವರ ಪತ್ನಿ ಶುಭಲಕ್ಷ್ಮೀ ಜ.17 ರಂದು ಬೆಳಿಗ್ಗೆ ಮನೆಯಲ್ಲಿದ್ದವರು, ಸ್ವಲ್ಪ ಸಮಯದ ಬಳಿಕ ಮನೆಯಲ್ಲಿ ಕಾಣದಿದ್ದು, ಪತಿ ಪ್ರಕಾಶ್ ಚಂದ್ರ ಪತ್ನಿಯನ್ನು ಮನೆಗೆ ಬಂದು ಸುತ್ತಮುತ್ತ ಎಲ್ಲಾ ಕಡೆ ಹುಡುಕಾಡಿ, ತೋಟಕ್ಕೆ ನೀರು ಹಾಯಿಸಲು ನಿರ್ಮಿಸಿದ್ದ ಕೃತಕ ಕಚ್ಚಾ ಮಣ್ಣಿನ ತೊಟ್ಟಿಯ ಬಳಿ ಹೋದಾಗ ಶುಭಲಕ್ಷ್ಮೀ ರವರ ಮೃತದೇಹ ನೀರಿನಲ್ಲಿ ಕವುಚಿ ಬಿದ್ದ ಸ್ಥಿತಿಯಲ್ಲಿ ಮೃತಪಟ್ಟಂತೆ ಕಂಡು ಬಂದಿರುತ್ತದೆ.
ಶುಭಲಕ್ಷ್ಮೀ ತೋಟದ ಗುಡ್ಡೆಯ ನೀರಿನ ತೊಟ್ಟಿಯಲ್ಲಿ ನೀರು ಇರುವ ಬಗ್ಗೆ ನೋಡಲು ಆಗಾಗ ಹೋಗುತ್ತಿದ್ದು ಜ.17 ರಂದು ಬೆಳಗ್ಗೆ ನೀರಿನ ತೊಟ್ಟಿಯ ಬಳಿ ನೀರು ನೋಡಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ತೊಟ್ಟಿಯ ನೀರಿಗೆ ಬಿದ್ದು ಉಸಿರುಗಟ್ಟಿ ಮೃತಪಟ್ಟಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂ 08-2024 ಕಲಂ 174 ಸಿ ಆರ್ ಪಿಸಿ ಯಂತೆ ಪ್ರಕರಣ ದಾಕಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


























