ಲಕ್ನೋ : ತಮಗೆ ಇಷ್ಟ ಬಂದಂತೆ ಇರುವವು ಎಂದರೆ ಅವು ಪ್ರಾಣಿಗಳು. ಅದರಲ್ಲಿ ಕೋತಿಗಳು ಎಂದರೆ ಎಲ್ಲ ಪ್ರಾಣಿಗಳಿಗಿಂತ ಹೆಚ್ಚಾಗಿಯೇ ಕಿಟಲೇ ಮಾಡಿಕೊಂಡುತ್ತವೆ. ಯಾರು ಹೇಳಿದ್ದನ್ನ ಕೇಳದೇ ಮರದಿಂದ ಮರಕ್ಕೆ, ಮನೆಯಿಂದ ಮನೆಗೆ ನೆಗೆದಾಡುತ್ತವೆ. ದೇವಾಲಯಗಳಲ್ಲೂ ಈ ಮಂಗಗಳ ಹಾವಳಿ ಕಡಿಮೆಯೇನು ಇಲ್ಲ. ದೇವರ ದರ್ಶನ ಪಡೆಯಲೆಂದು ದೇವಸ್ಥಾನಕ್ಕೆ ಹೋಗಿದ್ದ ಭಕ್ತನೊಬ್ಬನ ಐಪೋನ್ ಅನ್ನು ಕೋತಿಗಳು ಕಸಿದು ಫುಲ್ ಕಿಟಲೇ ಕೊಟ್ಟಿವೆ.
ಉತ್ತರಪ್ರದೇಶ ವೃಂದಾವನದ ರಂಗನಾಥ ದೇವಾಲಯಕ್ಕೆ ಭಕ್ತರೊಬ್ಬರು ಭೇಟಿ ನೀಡಿದ್ದರು. ಈ ವೇಳೆ ದೇವಾಲಯವನ್ನು ಸುತ್ತಾಡಿ ವೀಕ್ಷಣೆ ಮಾಡುವಾಗ ಕೋತಿಗಳು ಐಫೋನ್ ಕಸಿದುಕೊಂಡು ಹೋಗಿವೆ. ಬಳಿಕ ಗುಡಿಯ ಎತ್ತರದ ಕಾಂಪೌಂಡ್ ಮೇಲೆ ಎರಡ್ಮೂರು ಕೋತಿಗಳು ಐಫೋನ್ ಹಿಡಿದು ಕುಳಿತುಕೊಂಡಿವೆ. ಆಗ ಜನರು ಐಫೋನ್ಗಾಗಿ ಸಾಕಷ್ಟು ಸರ್ಕಸ್ ಮಾಡಿದರು ಕೋತಿ ಫೋನ್ ಅನ್ನು ಕೊಟ್ಟೇ ಇಲ್ಲ.
ಕೊನೆಗೆ ಫ್ರೂಟಿ ಜ್ಯೂಸ್ಗೆ ಡೀಲ್ ಮಾಡಿಕೊಂಡಿದೆ. ಕೆಳಗಿನಿಂದ ವ್ಯಕ್ತಿಯೊಬ್ಬರು ಮೊದಲು ಫ್ರೂಟಿ ಜ್ಯೂಸ್ ಒಂದನ್ನು ಮೇಲಕ್ಕೆ ಎಸೆದರು. ಅದು ಕೋತಿ ಕೈಗೆ ಸಿಗಲಿಲ್ಲ. 2ನೇ ಬಾರಿ ಎಸೆಯುತ್ತಿದ್ದಂತೆ ಫ್ರೂಟಿ ಜ್ಯೂಸ್ ಅನ್ನು ಕ್ಯಾಚ್ ಮಾಡಿದ ಕೋತಿ ತಕ್ಷಣ ಐಫೋನ್ ಬಿಸಾಕಿ ಹೋಗಿದೆ. ಐಫೋನ್ ಮೇಲಿಂದ ಬೀಳುತ್ತಿದ್ದಂತೆ ಕೆಳಗಿದ್ದವರು ನೆಲಕ್ಕೆ ಬೀಳದಂತೆ ಕ್ಯಾಚ್ ಹಿಡಿದಿದ್ದಾರೆ. ಸದ್ಯ ಈ ವೀಡಿಯೋವನ್ನು ಇನ್ಸ್ಟಾದಲ್ಲಿ ವಿಕಾಸ್ ಎನ್ನುವರು ಶೇರ್ ಮಾಡಿಕೊಂಡು ವೃಂದಾವನ ಸಿಟಿಯ ಮಂಗ, ಫ್ರೂಟಿಗಾಗಿ ಐಫೋನ್ ಮಾರಾಟ ಮಾಡಿತು ಎಂದು ಬರೆದುಕೊಂಡಿದ್ದಾರೆ.


























