ಪಾಕಿಸ್ತಾನದ ಸ್ಟಾರ್ ಕ್ರಿಕೆಟರ್ ಶೋಯೆಬ್ ಮಲಿಕ್ ಸಾನಿಯಾ ಮಿರ್ಜಾಗೆ ಕೈಕೊಟ್ಟು ಮತ್ತೊಂದು ಮದುವೆ ಆಗಿದ್ದಾರೆ. ಪಾಕಿಸ್ತಾನದ ನಟಿ ಸನಾ ಜಾವೇದ್ರನ್ನು ಮದುವೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ ಮಲಿಕ್.
ಮಲಿಕ್ ಮದುವೆಗೂ ಮೂರು ದಿನ ಬಾಕಿ ಇರುವಾಗ ಸಾನಿಯಾ ಮಿರ್ಜಾ ನಿಗೂಢ ಪೋಸ್ಟ್ ಒಂದನ್ನು ಮಾಡಿದ್ದರು. ಇದು ಇಬ್ಬರ ನಡುವಿನ ಡಿವೋರ್ಸ್ ವದಂತಿಗೆ ಪುಷ್ಟಿ ನೀಡಿತ್ತು. ಅಂದು ಸಾನಿಯಾ ಹಾಕಿದ್ದ ನಿಗೂಢ ಪೋಸ್ಟ್ಗೆ ಉತ್ತರ ಸಿಕ್ಕಿದೆ. ಮಲಿಕ್ ಇನ್ನೊಂದು ಮದುವೆ ಆಗಿರುವ ಹಿನ್ನೆಲೆಯಲ್ಲಿ ಸಾನಿಯಾ ಮಿರ್ಜಾ ಏನ್ಮಾಡ್ತಾರೆ ಅನ್ನೋದು ಕುತೂಹಲ ಮೂಡಿಸಿದೆ. ಇಬ್ಬರಿಗೂ ಡಿವೋರ್ಸ್ ಆಗಿದೆ ಎನ್ನಲಾಗುತ್ತಿದ್ದರೂ, ಅಧಿಕೃತ ಮಾಹಿತಿ ಇಲ್ಲ. ವರದಿಗಳ ಪ್ರಕಾರ ಕಳೆದ ಒಂದು ವರ್ಷಗಳಿಂದ ಈ ಜೋಡಿ ಪ್ರತ್ಯೇಕವಾಗಿ ವಾಸಿಸುತ್ತಿದೆ ಎನ್ನಲಾಗಿದೆ.

ಮದುವೆ ಕಷ್ಟ. ವಿಚ್ಛೇದನ ಕಷ್ಟ. ನಿಮ್ಮ ಆಯ್ಕೆ ಕಠಿಣ. ಫಿಟ್ ಆಗಿ ಉಳಿಯುವುದು ಕಷ್ಟ. ನಿಮ್ಮ ಆಯ್ಕೆ ಕಠಿಣ. ಸಾಲ ಮಾಡೋದು ಕಷ್ಟ. ಆರ್ಥಿಕವಾಗಿ ಶಿಸ್ತುಬದ್ಧವಾಗಿ ಉಳಿಯುವುದು ಕಷ್ಟ. ನಿಮ್ಮ ಆಯ್ಕೆ ಆಯ್ಕೆ. ಸಂವಹನ ಕಷ್ಟ. ಸಂವಹನ ಮಾಡದಿರುವುದು ಕಷ್ಟ. ನಿಮ್ಮ ಆಯ್ಕೆ ಕಠಿಣ. ಜೀವನವು ಎಂದಿಗೂ ಸುಲಭವಾಗುವುದಿಲ್ಲ. ಇದು ಯಾವಾಗಲೂ ಕಷ್ಟಕರವಾಗಿರುತ್ತದೆ. ಆದರೆ ನಾವು ನಮ್ಮ ಕಠಿಣ ಕೆಲಸವನ್ನು ಆಯ್ಕೆ ಮಾಡಬಹುದು.
ಜನವರಿ 8 ರಂದು ಸಾನಿಯಾ ಮಿರ್ಜಾ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದರು. ನಿಮ್ಮ ಹೃದಯದ ಶಾಂತಿಗೆ ಏನಾದರೂ ಭಂಗ ತಂದಾಗ ಅದನ್ನು ಬಿಟ್ಟುಬಿಡಿ ಎಂದಿದ್ದರು. ಮಾತ್ರವಲ್ಲ ಶೋಯೆಬ್ ಮಲಿಕ್ ಅವರೊಂದಿಗಿನ ಇತ್ತೀಚಿನ ಹೆಚ್ಚಿನ ಚಿತ್ರಗಳನ್ನು ಸಾನಿಯಾ Instagramನಿಂದ ತೆಗೆದುಹಾಕಿದ್ದರು. ಇಬ್ಬರ ನಡುವಿನ ಡಿವೋರ್ಸ್ ವದಂತಿ 2022 ನವೆಂಬರ್ನಿಂದ ಶುರುವಾಗಿತ್ತು.

ಇನ್ನು, ಈ ಸಂಬಂಧ ಈಗ ಪಿಟಿಐಗೆ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಂದೆ ಇಮ್ರಾನ್ ಮಿರ್ಜಾ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮಗಳು ಶೋಯೆಬ್ ಅವರಿಗೆ ಖುಲಾ ನೀಡಿದ್ದಾಳೆ. ಖುಲಾ ಎಂದರೆ ಸ್ತ್ರೀ ತನ್ನ ಪತಿಯಿಂದ ಬಿಡುಗಡೆ ಕೇಳುವ ಸ್ವಾತಂತ್ರ್ಯ. ಇದು ಸಮ್ಮತಿಯ ವಿಚ್ಛೇದನವಾಗಿದ್ದು, ಮದುವೆಯ ಬಂಧದಿಂದ ತನ್ನನ್ನು ಬಿಡುಗಡೆ ಮಾಡುವಂತೆ ಪತಿಗೆ ಮಹಿಳೆ ತಿಳಿಸುವ ಕ್ರಮ ಎಂದರು.

ಹೌದು, ಇಬ್ಬರು 4 ತಿಂಗಳ ಹಿಂದೆಯೇ ವಿಚ್ಛೇದನ ಪಡೆದಿದ್ದಾರೆ ಎಂದು ವರದಿಯಾಗಿದೆ. ಶೋಯೆಬ್ ಮತ್ತು ಸಾನಿಯಾ ಡಿವೋರ್ಸ್ಗೆ ಕಾರಣವೇ ಪಾಕ್ ನಟಿ ಸನಾ ಜಾವೇದ್ ಎನ್ನಲಾಗಿದೆ. ಕಳೆದ ಮೂರು ವರ್ಷಗಳಿಂದ ಶೋಯೆಬ್, ಸನಾ ಜಾವೇದ್ ಡೇಟಿಂಗ್ ಮಾಡುತ್ತಿದ್ದರು. ಈ ವಿಚಾರ ಗೊತ್ತಾದ ಮೇಲೆ ಸಾನಿಯಾ, ಶೋಯೆಬ್ ಮಧ್ಯೆ ಜಗಳ ಆಗಿತ್ತು. ಈಗ ಇಬ್ಬರು ಡಿವೋರ್ಸ್ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.


























