ಪುತ್ತೂರು : ಅನಾರೋಗ್ಯದಿಂದಾಗಿ ಯುವತಿಯೋರ್ವಳು ನಿಧನರಾದ ಬಗ್ಗೆ ವರದಿಯಾಗಿದೆ.

ಕಲ್ಲೇಗ ರಕ್ತೇಶ್ವರಿ ವಠಾರ ನಿವಾಸಿ ಐಶ್ವರ್ಯ ಮೃತ ಯುವತಿ.
ಐಶ್ವರ್ಯ ಇಂಜಿನಿಯರಿಂಗ್ ಪದವೀಧರೆಯಾಗಿದ್ದು, ಕೆಲ ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಮೃತರು ಮನೆಯವರು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.


























