ಮುಂಡೂರು : ಮುಂಡೂರು ಗ್ರಾಮದ ನಡುಗುಡ್ಡೆ ಎಂಬಲ್ಲಿ ವಾಸ್ತವ್ಯವಿರುವ ವಿನಯ ನಾಯ್ಕ ಎಂಬವರ ಮನೆಯು ಮೇ.16 ರಂದು ಪ್ರಾಕೃತಿಕ ವಿಕೋಪದಿಂದಾಗಿ ಹಾನಿಯಾಗಿದ್ದು, ಈ ಅವಘಡಕ್ಕೆ ತಕ್ಷಣ ಸ್ಪಂದಿಸಿದ ಗ್ರಾಮಕರಣಿಕರು ಪ್ರಾಕೃತಿಕ ವಿಕೋಪದಿಂದಾಗಿ ಹಾನಿಯಾದ ಮನೆಯ ದುರಸ್ಥಿ ಕಾರ್ಯವನ್ನು ನೆರವೇರಿಸಿದರು.
ಗ್ರಾಮಕರಣಿಕರಾದ ಶ್ರೀಮತಿ ತುಳಸಿ,ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪ ಪುರಂದರ ಗೌಡ ಗ್ರಾಮ ಸಹಾಯಕರಾದ ಪುಟ್ಟಣ್ಣ ಗೌಡ, ಪಂಚಾಯತ್ ಕ್ಲರ್ಕ್ ದೇವಪ್ಪ ನಾಯ್ಕ, ಮೋಹನ ನಾಯ್ಕ, ಧನಂಜಯ ಕುಲಾಲ್ ಸಹಕರಿಸಿದರು.