ಬೆಂಗಳೂರು : ಬರ್ತಡೇ ಪಾರ್ಟಿ ವೇಳೆ ಸ್ನೇಹಿತನನ್ನು ಬರ್ಬರ ಹತ್ಯೆ ಮಾಡಿದ ಘಟನೆ ನೆಲಮಂಗಲ ಸಮೀಪದ ಅರಶಿನಕುಂಟೆ ಬಳಿ ನಡೆದಿದೆ.
ಅಶೋಕ್ ಅಲಿಯಾಸ್ ಮಂಡ್ಲಾ ಕೊಲೆಯಾದ ಯುವಕ.
ಮೃತ ಅಶೋಕ್ ಬೆಂಗಳೂರಿನ ಲಗ್ಗೆರೆಯಲ್ಲಿ ಹೋಟೆಲ್ ನಡೆಸುತ್ತಿದ್ದ. ನಿನ್ನೆ ಸಂಜೆ ಸ್ನೇಹಿತ ದಿಲೀಪ್ ಬರ್ತ್ಡೇ ಪಾರ್ಟಿಗೆ ಅಶೋಕ್ ತೆರಳಿದ್ದ. ಈ ವೇಳೆ ಕುಡಿದ ಅಮಲಿನಲ್ಲಿ ಸ್ನೇಹಿತರ ನಡುವೆ ಕಿರಿಕ್ ಆಗಿದೆ. ಗಲಾಟೆ ತಾರಕಕ್ಕೆ ಏರಿದ್ದು, ಅಶೋಕ್ನನ್ನು ಕೊಲೆ ಮಾಡಲಾಗಿದೆ.
ಜನವರಿ 21 ರಂದು ದಿಲೀಪ್ ಬರ್ತ್ ಡೇ ಇತ್ತು. ಪಾರ್ಟಿ ಕೊಡುವಂತೆ ಎಲ್ಲಾ ಸ್ನೇಹಿತರು ಕೇಳಿದ್ದರು. ಹಾಗಾಗಿ ಮಂಜುನಾಥ್ ಗೌಡ ಅವರ ತೋಟದ ಮನೆಯಲ್ಲಿ ನಿನ್ನೆ ಪಾರ್ಟಿ ಮಾಡಲು ಬಂದಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ.
4 ರಿಂದ 5 ಜನ ಸೇರಿ ಅಶೋಕ್ನನ್ನ ಹತ್ಯೆ ಮಾಡಿದ್ದಾರೆ. ಸ್ಥಳಕ್ಕೆ ಕುದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

























