ಪುತ್ತೂರು : ಪೆರಾಬೆ ಮಾಯಿಲ್ಗ ಶ್ರೀ ರಕ್ತೇಶ್ವರೀ ದೈವಸ್ಥಾನದಲ್ಲಿ ಶ್ರೀ ರಕ್ತೇಶ್ವರೀ, ಶ್ರೀ ಚಾಮುಂಡಿ, ಸಪರಿವಾರ ದೈವಗಳ ನರ್ತನೋತ್ಸವ ಫೆ.2ರಿಂದ 3ರವರೆಗೆ ನಡೆಯಲಿದೆ.
ಫೆ.2 ರಂದು ಬೆಳಿಗ್ಗೆ ಕುಪ್ಲಾಜೆ ಶ್ರೀ ಸುಬ್ರಹ್ಮಣ್ಯ ಉಪಾಧ್ಯಾಯರ ನೇತೃತ್ವದಲ್ಲಿ ನಾಗತಂಬಿಲ, ಹರಿಸೇವೆ ಹಾಗೂ ದೈವಗಳಿಗೆ ಕಲಶಾಭಿಷೇಕ ಮತ್ತು ಸಂಜೆ 4 ರಿಂದ ಭಂಡಾರ ಹಿಡಿದು ಶ್ರೀ ರಕ್ತೇಶ್ವರೀ, ಶ್ರೀ ಚಾಮುಂಡಿ ಸಪರಿವಾರ ದೈವಗಳ ನರ್ತನೋತ್ಸವ ನಡೆಯಲಿದೆ.
ಫೆ.2 ರಂದು ಬೆಳಿಗ್ಗೆ 6 ಗಂಟೆಯಿಂದ ನಾಗತಂಬಿಲ, ಹರಿಸೇವೆ ಹಾಗೂ ದೈವಗಳಿಗೆ ಕಲಶಾಭಿಷೇಕ, ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಲಿದೆ.
ಸಂಜೆ 4 ಗಂಟೆಯಿಂದ ಶ್ರೀ ರಕ್ತೇಶ್ವರೀ ಸಪರಿವಾರ ದೈವಗಳ ಭಂಡಾರ ತೆಗೆದು., ರಾತ್ರಿ ಶ್ರೀ ರಕ್ತೇಶ್ವರಿ ದೈವದ ನರ್ತನ ಸೇವೆ ನಡೆಯಲಿದೆ.
ಬಳಿಕ ಅನ್ನಸಂತರ್ಪಣೆ, ಶ್ರೀ ಚಾಮುಂಡಿ, ಕಲ್ಲುರ್ಟಿ, ಕುಪ್ಪೆ ಪಂಜುರ್ಲಿ, ಸತ್ಯದೇವತೆ ದೈವಗಳ ನೇಮೋತ್ಸವ ನಡೆಯಲಿದೆ.
ಫೆ.3 ರಂದು ಬೆಳಿಗ್ಗೆ ವರ್ಣರ ಪಂಜುರ್ಲಿ, ಗುಳಿಗ, ಮಾಳದ ಕೊರಗ ದೈವಗಳ ನೇಮೋತ್ಸವ ಜರುಗಲಿದೆ.

























