ವಿಟ್ಲ : ಸುದ್ದಿ ಬಿಡುಗಡೆ ಪತ್ರಿಕೆಯ ಸಿಬ್ಬಂದಿ, ವಿಟ್ಲ ಸಮೀಪದ ಕುದ್ದುಪದವು ನಿವಾಸಿ ನವೀನ್ ಕಿಶೋರ್ ಹೃದಯಾಘಾತದಿಂದ ನಿಧನರಾದರು.

ನವೀನ್ ಅವರಿಗೆ ಜ.29 ರಂದು ರಾತ್ರಿ ಹೃದಯಾಘಾತವಾಗಿದ್ದು, ತಡರಾತ್ರಿ ಅವರ ಸಹೋದರ ಎಚ್ಚರಗೊಂಡಾಗ ನವೀನ್ ಕುಸಿದು ಬಿದ್ದಿದ್ದರೆನ್ನಲಾಗಿದೆ.
ತಕ್ಷಣ ಮನೆಯವರು ಹಾಗೂ ಸ್ಥಳೀಯರು ವಿಟ್ಲ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅದಾಗಲೇ ಅವರು ಮೃತಪಟ್ಟಿದ್ದರು.
ಮೃತರು ತಾಯಿ, ಸಹೋದರ ಹಾಗೂ ಸಹೋದರಿಯರನ್ನು ಅಗಲಿದ್ದಾರೆ.


























