ಮಂಗಳೂರು: ಕೊರೊನಾ ಲಸಿಕೆಯ ಬಗ್ಗೆ ಕೆಲವು ಚರ್ಚ್ ಗಳಲ್ಲಿ ಅಪಪ್ರಚಾರ ಮಾಡಿ ಲಸಿಕೆ ಹಾಕಿಸದಂತೆ ಕರೆ
ನೀಡಲಾಗುತ್ತಿದೆ ಎಂದು ಆರೋಪಿಸಿದ್ದ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ೪೦ಕ್ಕೂ ಅಧಿಕ ದೂರುಗಳನ್ನು ದಾಖಲಿಸಲಾಗಿದೆ.
ಶೋಭಾ ಹೇಳಿಕೆಯ ವಿರುದ್ಧ ಕ್ರೈಸ್ತ ಸಮುದಾಯ ಮಾತ್ರವಲ್ಲದೆ ಇತರ ಸಮುದಾಯದವರೂ ಆಕ್ರೋಶ
ವ್ಯಕ್ತಪಡಿಸಿದ್ದರು.ಚರ್ಚ್ ಗಳ ಮೇಲೆ ಆರೋಪ ಮಾಡಿರುವ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಮಾಜಿ ಶಾಸಕ ಐವನ್
ಡಿ’ಸೋಜ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರ ನಿಯೋಗ ಕಮಿಷನರ್‌ಗೆ ದೂರು ಸಲ್ಲಿಸಿ, ಪಾಂಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದು ಎಫ್‌ಐಆರ್ ದಾಖಲಿಸಲಾಗಿದೆ.
ಮಂಗಳೂರು ಡಯಾಸಿಸ್‌ನಿಂದ ದ.ಕ. ಜಿಲ್ಲೆಯಾದ್ಯಂತ ವಿವಿಧ ಠಾಣೆಯಲ್ಲಿ ೪೦ಕ್ಕೂ ಅಧಿಕ ದೂರುಗಳನ್ನು ದಾಖಲಿಸಲಾಗಿದೆ. ಗುಲ್ಬರ್ಗ, ಬೆಂಗಳೂರು,
ಯಾದಗಿರಿ ಹಾಗೂ ಇತರ ಜಿಲ್ಲೆಗಳಲ್ಲೂ ದೂರು ದಾಖಲಿಸಲಾಗಿದೆ.