ಮೈಸೂರು : ಸಾಲ ವಾಪಸ್ ಕೊಡಲಿಲ್ಲವೆಂದು ದಂಪತಿ ಆತ್ಮಹತ್ಯೆ ಮಾಡಿದ ಘಟನೆ ಮೈಸೂರಿನ ಯರಗನಹಳ್ಳಿ ನಡೆದಿದೆ.
ವಿಶ್ವ (34), ಸುಶ್ಮ (28) ಆತ್ಮಹತ್ಯೆಗೆ ಶರಣಾದ ದಂಪತಿ.
ಸಾಯುವ ಮುನ್ನ ದಂಪತಿ ವೀಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಿವು ಎಂಬಾತನಿಗೆ ವಿಶ್ವ ಬೇರೊಬ್ಬರಿಂದ ಸಾಲ ಕೊಡಿಸಿದ್ದನು. ಸುಮಾರು 5 ಲಕ್ಷ ರೂಪಾಯಿ ಸಾಲ ಕೊಡಿಸಿದ್ದನು. ಆದರೆ ಕೊಟ್ಟ ಸಾಲವನ್ನ ಮರುಪಾವತಿ ಮಾಡಿರಲಿಲ್ಲ. ಸಾಲಕೊಟ್ಟವರು ಸಾಲಕೊಡುವಂತೆ ಕೇಳುತ್ತಿದ್ದ ಕಾರಣ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಶ್ವ ತರಕಾರಿ ವ್ಯಾಪಾರ ಮಾಡಿಕೊಂಡಿದ್ದನು. ಚೋರನಹಳ್ಳಿ ರಾಜಣ್ಣ ಎಂಬಾತನಿಗೆ ವಿಶ್ವ ತನ್ನ ಚಿನ್ನಾಭರಣ ಕೊಟ್ಟಿದ್ದನು. ಆದರೆ ಆ ಚಿನ್ನವನ್ನು ವಾಪಸ್ ಕೊಡದೆ ರಾಜಣ್ಣ ಸತಾಯಿಸುತ್ತಿದ್ದನು ಇದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಅಪ್ಲೋಡ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


























