ಪುತ್ತೂರು : ಸಂಟ್ಯಾರ್ ಅಪಾಯಕಾರಿ ರಸ್ತೆಯ ದುರಸ್ಥಿ ಕಾರ್ಯ ಫೆ.3 ರಂದು ಆರಂಭಗೊಳ್ಳಲಿದೆ ಎಂದು ಶಾಸಕರಾದ ಅಶೋಕ್ ರೈ ತಿಳಿಸಿದ್ದಾರೆ.

ಸಂಟ್ಯಾರ್ ನಿಂದ ಪಾಣಾಜೆಗೆ ತೆರಳುವ ರಸ್ತೆಯ ಬಳಕ್ಕ ಎಂಬಲ್ಲಿರುವ ಸೇತುವೆಯ ಬಳಿ ರಸ್ತೆ ಅಪಾಯಕಾರಿ ಸ್ಥಿತಿಯಲ್ಲಿದೆ. ರಸ್ತೆ ನಿರ್ಮಾಣದ ವೇಳೆ ಅಪಾಯಕಾರಿ ಹುಬ್ಬುಗಳನ್ನು ತೆರವು ಮಾಡದೆ ಇರುವ ಕಾರಣ ಈ ಭಾಗದಲ್ಲಿ ಸಂಚರಿಸುವ ವಾಹನಗಳು ರಸ್ತೆಯ ಪಕ್ಕಕ್ಕೆ ತೆರಳಿ ಪಲ್ಟಿಯಾಗುತ್ತಿದೆ. ಇದೇ ಸ್ಥಳದಲ್ಲಿ ವಾಹನ ಅಪಘಾತದಿಂದ ಮೂರು ಜೀವಗಳು ಬಲಿಯಾಗಿದೆ. ಮೂರುದಿನಗಳ ಹಿಂದೆ ರಿಕ್ಷಾವೊಂದು ಪಲ್ಟಿಯಾಗಿ ವ್ಯಕ್ತಿ ಮೃತಪಟ್ಟಿದ್ದು, ಕಳೆದ ವರ್ಷ ನಿಡ್ಪಳ್ಳಿ ಗ್ರಾಪಂ ಸದಸ್ಯರ ಕಾರೊಂದು ಪಲ್ಟಿಯಾಗಿ ಮೃತಪಟ್ಟಿದ್ದರು.
ಅಪಾಯಕಾರಿ ರಸ್ತೆಯನ್ನು ದುರಸ್ಥಿ ಮಾಡಿಸುವಂತೆ ಸಾರ್ವಜನಿಕರು ಶಾಸಕರಾದ ಅಶೋಕ್ ರೈ ಯವರಲ್ಲಿ ಮನವಿ ಮಾಡಿದ್ದು, ಶಾಸಕರ ಮನವಿಗೆ ಇಲಾಖೆ ಸ್ಪಂದಿಸಿದ್ದು, ಫೆ.3 ಶನಿವಾರದಂದು ದುರಸ್ಥಿ ಕಾರ್ಯ ನಡೆಯಲಿದೆ.

























