ಬೆಳ್ತಂಗಡಿ : ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿದ ಘಟನೆ ಸವಣಾಲು ಗ್ರಾಮದ ಹಲಸಿನ ಕಟ್ಟೆ ಮಾರಿಗುಡಿ ಬಳಿ ನಡೆದಿದೆ.
ಫೆ.1 ರಂದು ಸಂಜೆ ಬೆಳ್ತಂಗಡಿ ತಾಲೂಕು ಸವಣಾಲು ಗ್ರಾಮದ ಹಲಸಿನ ಕಟ್ಟೆ ಮಾರಿಗುಡಿಯ ಬಳಿ ಕೋಳಿ ಅಂಕ ನಡೆಯುತ್ತಿದ್ದಾಗ ಬೆಳ್ತಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕರಾದ (ತನಿಖೆ ) ಚಂದ್ರಶೇಖರ ಎ.ಎಂ. ಅವರು ಠಾಣಾ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿರುತ್ತಾರೆ.
ಈ ವೇಳೆ ಕೃತ್ಯದಲ್ಲಿ ಭಾಗವಹಿಸುತ್ತಿದ್ದವರು ಪರಾರಿಯಾಗಿದ್ದು, ಸ್ಥಳದಲ್ಲಿದ್ದ ಕಾಲಿಗೆ ಕತ್ತಿಯನ್ನು ಕಟ್ಟಲಾಗಿದ್ದ ಎರಡು ಕೋಳಿಗಳನ್ನು ವಶಕ್ಕೆ ಪಡೆಯಲಾಗಿದೆ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 11/2024 ಕಲ;87 ಕೆ ಪಿ ಆಕ್ಟ್ 11(1)(n) OF CRUELTY TO ANIMALS ACT, 1960 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

























