ಬಿಜೆಪಿಯ ಹಿರಿಯ ಮುತ್ಸದ್ದಿ ಎಲ್.ಕೆ ಅಡ್ವಾಣಿಯವರಿಗೆ ದೇಶದ ಪ್ರತಿಷ್ಠಿತ ‘ಭಾರತ ರತ್ನ’ ಪ್ರಶಸ್ತಿಯನ್ನು ಪ್ರಧಾನಿ ಮೋದಿ ಅವರು ಘೋಷಣೆ ಮಾಡಿದ್ದಾರೆ.
ಲಾಲ್ ಕೃಷ್ಣ ಅಡ್ವಾಣಿಯವರು ಎಲ್.ಕೆ ಅಡ್ವಾಣಿ ಎಂದೇ ಪರಿಚಿತರು. ಬಿಜೆಪಿ ಪಕ್ಷದ ಸಹ ಸಂಸ್ಥಾಪಕರಲ್ಲಿ ಇವರು ಕೂಡ ಒಬ್ಬರಾಗಿದ್ದಾರೆ. ಹಿಂದೂ ರಾಷ್ಟ್ರೀಯತಾವಾದಿ ಸ್ವಯಂಸೇವಕ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರೂ ಆಗಿದ್ದಾರೆ.
90 ದಶಕದಲ್ಲಿ ರಾಮಮಂದಿರಕ್ಕಾಗಿ ಹೋರಾಟ ಮಾಡಿದ ಧೀಮಂತ ನಾಯಕ. ಇವರು 2002 ರಿಂದ 2004ರ ವರೆಗೆ ಭಾರತದ ಉಪ ಪ್ರಧಾನಮಂತ್ರಿ ಆಗಿದ್ದರು.
ಎಲ್.ಕೆ ಅಡ್ವಾಣಿಯವರು ಅತ್ಯಂತ ದೀರ್ಘಾವಧಿಯವರೆಗೆ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿದ್ದರು. ಹೀಗಾಗಿ 2009ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿ ಕೂಡ ಆಗಿದ್ದರು. ಆದರೆ ಈ ಎಲೆಕ್ಷನ್ನಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಹೀಗಾಗಿ ಅವರಿಗೆ ಪ್ರಧಾನಿ ಹುದ್ದೆ ಕೈ ತಪ್ಪಿತ್ತು.
I am very happy to share that Shri LK Advani Ji will be conferred the Bharat Ratna. I also spoke to him and congratulated him on being conferred this honour. One of the most respected statesmen of our times, his contribution to the development of India is monumental. His is a… pic.twitter.com/Ya78qjJbPK
— Narendra Modi (@narendramodi) February 3, 2024


























