ಸ್ಯಾಂಡಲ್ವುಡ್ ನಟ ದರ್ಶನ್ ‘ಕಾಟೇರ’ ಸಕ್ಸಸ್ ಬಳಿಕ ಇದೀಗ ‘ಡೆವಿಲ್’ಗೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ನಾಯಕಿ ಫಿಕ್ಸ್ ಆಗಿದ್ದು, ಕರಾವಳಿ ಕುವರಿ, ಬ್ಯಾಡ್ಮಿಂಟನ್ ಆಟಗಾರ್ತಿ, ಬರಹಗಾರ್ತಿಯು ಆಗಿರುವ ರಚನಾ ರೈ ನಟಿಸುತ್ತಿದ್ದಾರೆ.
ಮೂಲತಃ ಪುತ್ತೂರಿನವರಾಗಿರುವ ರಚನಾ ರೈ ಈಗಾಗಲೇ ಸರ್ಕಸ್ ಎಂಬ ತುಳು ಸಿನಿಮಾದಲ್ಲಿ ನಟಿಸಿದ್ದಾರೆ. ಇದೀಗ ಡಿ ಬಾಸ್ ದರ್ಶನ್ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಅಂದಹಾಗೆಯೇ ಡೆವಿಲ್ ಸಿನಿಮಾ ಮಿಲನ ಪ್ರಕಾಶ್ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ. ಈ ಸಿನಿಮಾಗೆ ಚಿತ್ರತಂಡ ನಾಯಕಿಯ ಹುಡುಕಾಟದಲ್ಲಿತ್ತು. ಆದರೀಗ ಕಡಲ ಕುವರಿ ರಚನಾ ರೈ ಡೆವಿಲ್ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದಲ್ಲದೆ, ಈ ನಟಿ ಅಶೋಕ್ ‘ಬ್ಲೇಡ್’ ಸಿನಿಮಾದಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ.


























