ಬಂಟ್ವಾಳ : ಬಜರಂಗದಳ ಕಲ್ಲಡ್ಕ ಪ್ರಖಂಡದವರು ನೀಡಿರುವ ಮಾಹಿತಿ ಮೇರೆಗೆ ದಾಳಿ ನಡೆಸಿದ ಬಿ.ಸಿ.ರೋಡ್ ನಗರ ಠಾಣಾ ಪೊಲೀಸರು ಗೋ ಮಾಂಸ ಸಹಿತ ಇಬ್ಬರನ್ನು ವಶಕ್ಕೆ ಪಡೆದ ಬಗ್ಗೆ ವರದಿಯಾಗಿದೆ.

ಇಂದು ಮುಂಜಾನೆ ಕಲ್ಲಡ್ಕ ಸಮೀಪದ ಮದಕ ಬಳಿ ದಾಳಿ ನಡೆಸಿದ ಪೊಲೀಸರು ಸುಮಾರು 2 ಕಿಂಟ್ವಾಲ್ ಗೋ ಮಾಂಸ, 1 ಆಟೋ ರಿಕ್ಷಾ, 1 ಆಲ್ಟೊ ಕಾರು, 1 ಬೈಕ್ ಹಾಗೂ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.


ಓರ್ವ ಪರಾರಿಯಾಗಿದ್ದಾನೆನ್ನಲಾಗಿದೆ.






























