ಮುಂಡೂರು : ಮುಂಡೂರು ಗ್ರಾಮದ ಮರ್ತಡ್ಕ ಎಂಬಲ್ಲಿ ಪ್ರಗತಿಪರ ಕೃಷಿಕ ಬಾಲಕೃಷ್ಣ ರೈ ಎಂಬವರ ತೋಟಕ್ಕೆಹಾಗೂ ಮುಂಡೂರು ಗ್ರಾಮದ ಹಲವು ಕಡೆ ತೌಕ್ತೆ ಚಂಡಮಾರುತದಿಂದಾಗಿ ಸುರಿದ ಭಾರಿ ಮಳೆಯ ಸಂದರ್ಭದಲ್ಲಿ ಸಿಡಿಲು ಬಡಿದು ಸುಮಾರು 50ಕ್ಕಿಂತಲೂ ಹೆಚ್ಚಿನ ಅಡಿಕೆ ಸಸಿ ನಾಶ ಹೊಂದಿದ್ದು ಭಾರಿ ನಷ್ಟ ಸಂಭವಿಸಿದೆ.
ಇವರ ತೋಟಕ್ಕೆ ಇಂದು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪುಷ್ಪ ಪುರಂದರ ಗೌಡ ಹಾಗೂ ಪಂಚಾಯತ್ ಸದಸ್ಯರು ಬಾಲಕೃಷ್ಣ ಪೂಜಾರಿ, ಅಶೋಕ್ ಪುತ್ತಿಲ, ಅರುಣಾ ಕಣ್ಣರ್ನೂಜಿ. ಭೇಟಿ ನೀಡಿ ಪರಿಶೀಲಿಸಿದರು. ಮೇಲಧಿಕಾರಿಗಳಿಗೆ ಸಂಪರ್ಕಿಸಿದ ಅಧ್ಯಕ್ಷರು ಪ್ರಕೃತಿ ವಿಕೋಪತಡಿ 1ಅಡಿಕೆ ಸಸಿಗೆ 1ಸಾವಿರ ದಂತೆ ಪರಿಹಾರ ನೀಡುವಂತೆ ವಿನಂತಿಸಿದರು. ಪಂಚಾಯತ್ ನಿಂದ ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಪತ್ರ ಬರಿಯುವುದಾಗಿ ತಿಳಿಸಿದರು. ಈ ವರೆಗೂ ಸಿಡಿಲು ಬಿದ್ದು ನಾಶ ವಾದ ತೋಟಕ್ಕೆ ಪರಿಹಾರ ಸಿಗದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಶಾಸಕರು ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳನ್ನು ಕರಿಸಿ ಸೂಕ್ತ ನಿರ್ದೇಶನ ನೀಡಲು ಅವರಲ್ಲಿ ವಿನಂತಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಹರೀಶ್ ನಾಯ್ಕ್, ಎಪಿಎಂಸಿ ಮಾಜಿ ಸದಸ್ಯ ಸುಂದರ ಬಿಕೆ. ಸ್ಥಳೀಯ ಪ್ರಮುಖರಾದ ಅರುಣ್ ಪುತ್ತಿಲ, ಮುಂಡೂರು ಹಾಲು ಉತ್ಪಾದಕರ ಸಂಘದ ನಿರ್ದೇಶಕ ಅನಿಲ್ ಕುಮಾರ್, ರಾಮಣ್ಣ ರೈ, ಅಶೋಕ್ ನಾಯ್ಕ್ ಉಪಸ್ಥಿತರಿದ್ದರು.